»   » ಗುರುಪ್ರಸಾದ್ 'ಇದು ಬೊಂಬೆಯಾಟವಯ್ಯಾ'

ಗುರುಪ್ರಸಾದ್ 'ಇದು ಬೊಂಬೆಯಾಟವಯ್ಯಾ'

Posted By:
Subscribe to Filmibeat Kannada

'ಮಠ' ಹಾಗೂ 'ಎದ್ದೇಳು ಮಂಜುನಾಥ' ಹಿಟ್ ಚಿತ್ರಗಳ ರೂವಾರಿ ಗುರು ಪ್ರಸಾದ್ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಎಪ್ಪತ್ತೈದರ ಸಂಭ್ರಮದಲ್ಲಿರುವ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದಂತಹ ಕಾಣಿಕೆಯೊಂದನ್ನು ಗುರು ನೀಡಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ 2ಡಿ ಚಿತ್ರವೊಂದನ್ನು ಗುರುಪ್ರಸಾದ್ ತಯಾರಿಸಿದ್ದಾರೆ. ಚಿತ್ರಕ್ಕೆ 'ಇದು ಬೊಂಬೆಯಾಟವಯ್ಯ' ಎಂದು ಹೆಸರಿಡಲಾಗಿದೆ.

'ಇದು ಬೊಂಬೆಯಾಟವಯ್ಯಾ ' ಇಡೀ ಚಿತ್ರ ರೂಪಗೊಂಡಿದ್ದು ಮೈಸೂರಿನಲ್ಲಿ. ಗುರುಪ್ರಸಾದ್ ಅವರ ಗೆಳೆಯ ಶಂಕರರಾವ್ ಸೇರಿದಂತೆ ಕೆ ಲೋಕೇಶ್ವರಯ್ಯ, ಜೆ ಸಿ ರಾಜು ಈ ವಿಶೇಷ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಎರಡು ಗಂಟೆ ಹತ್ತು ನಿಮಿಷಗಳ ಕಾಲಾವಧಿಯ 'ಇದು ಬೊಂಬೆಯಾಟವಯ್ಯಾ' ಚಿತ್ರವನ್ನು ಸುಮಾರು ರು.1.10 ಕೋಟಿ ರು.ಗಳಲ್ಲಿ ನಿರ್ಮಿಸಲಾಗಿದೆಯಂತೆ.

ಈಗಾಗಲೇ ಗುರು 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರವನ್ನು ಕೈಗೆತ್ತಿಕೊಂಡಿರುವುದು ಗೊತ್ತೆ ಇದೆ. ಏತನ್ಮಧ್ಯೆ ಗುರು ಮತ್ತೊಂದು ಚಿತ್ರದ ತಯಾರಿಯಲ್ಲಿದ್ದಾರೆ. 'ಎದ್ದೇಳು ಮಂಜುನಾಥ' ಚಿತ್ರದಲ್ಲಿ ಜಗ್ಗೇಶ್ ಜತೆ ಕುರುಡನ ಪಾತ್ರದಲ್ಲಿ ಮಿಂಚಿದ್ದ ತಬಲಾ ನಾಣಿಯೊಂದಿಗೆ ಹಾಸ್ಯ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ 'ಜುಗಲ್ ಬಂಧಿ' ಎಂದು ಹೆಸರಿಡಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada