For Quick Alerts
  ALLOW NOTIFICATIONS  
  For Daily Alerts

  ಶೀಘ್ರದಲ್ಲೇ ತೆರೆಗೆ ಅಪ್ಪಳಿಸಲಿದೆ ಬಹುನಿರೀಕ್ಷಿತ ಪರಿ

  |

  ಕನ್ನಡದಲ್ಲಿ ಸದ್ಯ ಬಹುನಿರೀಕ್ಷೆ ಮೂಡಿಸಿರುವ ಚಿತ್ರಗಳಲ್ಲಿ ಪರಿ'ಯೂ ಸೇರಿದೆ. ಈ ಚಿತ್ರದ ಬಿಡುಗಡೆಯನ್ನು ಇದೇ ತಿಂಗಳು 27 (27 ಏಪ್ರಿಲ್ 2012) ರಂದು ಘೋಷಿಸಲಾಗಿದೆ. ಇತ್ತೀಚಿಗೆ ಮುಂಬೈನಲ್ಲಿ ಈ ಚಿತ್ರದ ಪ್ರೀಮಿಯರ್ ಶೋ ನಡೆದಿತ್ತು. ಅದಕ್ಕೆ ಬಾಲಿವುಡ್ ನ ಖ್ಯಾತ ನಟ ಅಮೀರ್ ಖಾನ್ ಅವರನ್ನು ಆಮಂತ್ರಿಸಲಾಗಿತ್ತಾದರೂ ಅವರು ಬಂದಿರಲಿಲ್ಲ. ಆದರೆ ಸಾಕಷ್ಟು ಬಾಲಿವುಡ್ ನ ಪ್ರಸಿದ್ಧ ವ್ಯಕ್ತಿಗಳು ಬಂದು ಚಿತ್ರ ನೋಡಿ, ಮೆಚ್ಚಿ ಬೆನ್ನು ತಟ್ಟಿ ಹೋಗಿದ್ದಾರೆ.

  ಸುಧೀರ್ ಅತ್ತಾವರ್ ನಿರ್ದೇಶನದ ಪರಿ ಚಿತ್ರಕ್ಕೆ 'ನಿನ್ನ ಪ್ರೇಮದ ಪರಿಯ... ನಾನರಿಯೆ....!!' ಎಂಬ ಅಡಿಬರಹವಿದೆ. ವೀರ್ ಸಮರ್ಥ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಸಂಪನ್ನ ಮುತಾಲಿಕ್ ಕಥೆ ಬರೆದಿದ್ದಾರೆ. ಸಾಕಷ್ಟು ವಿಭಿನ್ನ ಕಥೆ ಹಾಗೂ ಚಿತ್ರಕಥೆಯನ್ನು ಹೊಂದಿರುವ ಈ ಚಿತ್ರವನ್ನು ಸಮರ್ಥವಾಗಿ ಹಾಗೂ ಭಿನ್ನವಾಗಿ ಸುಧೀರ್ ಅತ್ತಾವರ್ ನಿರ್ದೇಶಿಸಿದ್ದಾರೆ ಎನ್ನಲಾಗಿದೆ.

  ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಒಟ್ಟೂ 35 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಇದು ದೆಹಲಿ, ಚೆನ್ನೈ, ಮುಂಬೈ ಹಾಗೂ ಕ್ಯಾಲಿಪೋರ್ನಿಯಾದಲ್ಲೂ ತೆರೆಕಾಣುತ್ತಿದೆ. ವಿಭಿನ್ನ ಚಿತ್ರವೆಂಬ ಹಣೆಪಟ್ಟಿ ಹೊತ್ತಿರುವ ಪರಿಯನ್ನು ಪ್ರೇಕ್ಷಕ ಪ್ರಭುಗಳು ಇಷ್ಟಪಟ್ಟರೆ ಕನ್ನಡ ಚಿತ್ರಗಳ ಸದ್ಯದ ಸೋಲಿಗೆ ಪರಿಹಾರವಾಗಬಹುದು. ಇಲ್ಲದಿದ್ದರೆ ಪರಹಾಸ್ಯಕ್ಕೆ ಗುರಿಯಾಗುವ ದಾರಿ ಇದ್ದೇ ಇದೆಯಲ್ಲ! (ಒನ್ ಇಂಡಿಯಾ ಕನ್ನಡ)

  English summary
  Kannada Movie Pari Releases on this month end on 27th April 2012, not only all over Karnataka, also at Mumbai, Chennai, Delhi and USA. Sudhir Attavar Directed this. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X