»   » ಉಷಾ ನವರತ್ನರಾಮ್ ಕತೆ ಆಧಾರಿತ 'ತರಂಗಿಣಿ'

ಉಷಾ ನವರತ್ನರಾಮ್ ಕತೆ ಆಧಾರಿತ 'ತರಂಗಿಣಿ'

Posted By:
Subscribe to Filmibeat Kannada

ಉಷಾ ನವರತ್ನರಾಮ್ ರವರ ಕಾದಂಬರಿ ಆಧಾರಿತ ಚಿತ್ರ 'ತರಂಗಿಣಿ'. ಈ ಚಿತ್ರವನ್ನು ಶ್ರೀನಿವಾಸ್ ಕೌಶಿಕ್ ನಿರ್ದೇಶಿಸುತ್ತಿದ್ದಾರೆ. ಇವರು ಕಳೆದ ವರ್ಷ 'ಯಾರದು' ಚಿತ್ರ ನಿರ್ದೇಶಿಸಿದ್ದರು. ಫೆಬ್ರವರಿ 8 ರಂದು ಕೊಳ್ಳೇಗಾಲದಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಬೆಂಗಳೂರು ಸುತ್ತಮುತ್ತ ನಿರಂತರ ಚಿತ್ರೀಕರಣ ನಡೆಯುತ್ತಿದ್ದು, ಈ ತಿಂಗಳ ಕೊನೆಗೆ ಮುಕ್ತಾಯಗೊಳ್ಳಲಿದೆ.

ಚುರುಕಾದ ಸಂಭಾಷಣೆ, ಮನಮಿಡಿಯುವ ಹೃದಯ ಸ್ಪರ್ಶಿ ಸನ್ನಿವೇಶಗಳಿಂದ ಕೂಡಿದ ಸಾಂಸಾರಿಕ ಕಥಾಹಂದರವುಳ್ಳ ಈ ಚಿತ್ರಕ್ಕೆ ನಾಗೇಶ್ ಆಚಾರ್ಯರ ಛಾಯಾಗ್ರಹಣ, ಶ್ರೀನಿವಾಸ್ ಕೌಶಿಕ್‌ರ ಚಿತ್ರಕಥೆ, ಸಂಭಾಷಣೆ ಹಾಗೂ ಕಪಾಲಿ ಅವರ ನಿರ್ಮಾಣ, ನಿರ್ವಹಣೆ ಇದೆ. ಶ್ರೀ ಪರಮೇಶ್ವರಿ ಆರ್ಟ್ಸ್ ಲಾಂಛನದಲ್ಲಿ ವೈ.ಶ್ರೀನಿವಾಸ್ ಡಿ.ಬಿ. ಕುಮಾರಸ್ವಾಮಿ ನಿರ್ಮಿಸುತ್ತಿದ್ದಾರೆ.

ಈ ಚಿತ್ರದ ತಾರಾಗಣದಲ್ಲಿ ಮೋಹನ್, ಬಿ.ಸಿ. ಪಾಟೀಲ್, ತೇಜಸ್ವಿನಿ, ಶೋಭರಾಜ್, ಶ್ರೀನಿವಾಸಮೂರ್ತಿ, ದತ್ತಣ್ಣ, ಕೃಷ್ಣೇಗೌಡ, ಜಯಶ್ರೀ, ಎಂಡಿಕೌಶಿಕ್, ವೀಣಾ ಸುಂದರ್, ಆಡಿಟರ್ ಶ್ರೀನಿವಾಸ್ ಹಾಗೂ ಕೆ.ಎಸ್. ರವೀಂದ್ರನಾಥ್ ಅಭಿನಯಿಸುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada