For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್‌ಗೆ ಕಿಡ್ನಿ ತೊಂದರೆ ಚಿಕಿತ್ಸೆಗೆ ಲಂಡನ್‌ಗೆ ದೌಡು‌

  By Rajendra
  |

  ಸೂಪರ್ ಸ್ಟಾರ್ ರಜನಿಕಾಂತ್ ಅವರ ಆರೋಗ್ಯ ಸುಧಾರಿಸಿದ್ದು ಅವರು ಸೂಪರ್ ಫೈನಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿದ್ದವು. ಆದರೆ ಇದೀಗ ತಾನೆ ನಮ್ಮ ಚೆನ್ನೈ ಪ್ರತಿನಿಧಿಯಿಂದ ಬಂದ ವರ್ತಮಾನದ ಪ್ರಕಾರ, ರಜನಿಕಾಂತ್‌ಗೆ ಕಿಡ್ನಿಗಳಲ್ಲಿ ತೊಂದರೆ ಕಾಣಿಸಿಕೊಂಡಿದೆ. ಅವರು ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಹೊರಡಲು ಅನುವಾಗಿದ್ದಾರೆ.

  ಈ ವಿಷಯ ರಜನಿ ಅವರ ಅಪಾರ ಅಭಿಮಾನಿ ಬಳಗಕ್ಕೆ ಗೊತ್ತಾದರೆ ತಮ್ಮ ಪ್ರಯಾಣಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ, ಅವರ ಕುಟುಂಬ ರಹಸ್ಯವಾಗಿ ರಜನಿ ಅವರನ್ನು ಲಂಡನ್‌ಗೆ ಕರೆದೊಯ್ಯುವ ಸಿದ್ಧತೆಯಲ್ಲಿದೆ. ಇತ್ತೀಚೆಗಷ್ಟೆ ರಜನಿ ಅವರ ಆರೋಗ್ಯ ಪರೀಕ್ಷಿಸಲು ಯುಎಸ್‌ನಿಂದ ವೈದ್ಯರನ್ನು ಕರೆಸಲಾಗಿತ್ತು.

  ರಜನಿಕಾಂತ್ ಅವರು ಆರೋಗ್ಯದಿಂದಿದ್ದಾರೆ ಎಂಬುದನ್ನು ಅಭಿಮಾನಿಗಳಿಗೆ ತಿಳಿಸಲು ವಿಡಿಯೋ ಚಿತ್ರೀಕರಣ ಮಾಡುವುದಾಗಿಯೂ ಅವರ ಕುಟುಂಬ ತಿಳಿಸಿತ್ತು. ಚೆನ್ನೈನ ಶ್ರೀರಾಮಚಂದ್ರ ಮೆಡಿಕಲ್ ಸೆಂಟರ್‌ನ ತುರ್ತು ನಿಗಾ ಘಟಕದಲ್ಲಿದ್ದ ಅವರನ್ನು ಜನರಲ್ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಈಗ ಮತ್ತೆ ಕಿಡ್ನಿ ತೊಂದರೆ ಎದುರಾಗಿರುವ ಕಾರಣ, ರಜನಿ ಅಭಿಮಾನಿಗಳು ಮತ್ತಷ್ಟು ಆತಂಕಗೊಳ್ಳುವ ಸಾಧ್ಯತೆಗಳಿವೆ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Rajinikanth will fly off to London for further treatment to his disorder in the function of kidneys. His family members making arrangements for this trip secretly. Recently he has shifted to a private ward from the intensive care unit (ICU).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X