»   » ಭವ್ಯವಾದ ಮನೆಗೆ ಲಕ್ಕಿ ಸ್ಟಾರ್ ರಮ್ಯಾ ಗೃಹಪ್ರವೇಶ

ಭವ್ಯವಾದ ಮನೆಗೆ ಲಕ್ಕಿ ಸ್ಟಾರ್ ರಮ್ಯಾ ಗೃಹಪ್ರವೇಶ

Posted By:
Subscribe to Filmibeat Kannada

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದಿದ್ದಾರೆ ಹಿರಿಯರು. ಈ ಮಾತಿಗೆ ಲಕ್ಕಿ ಸ್ಟಾರ್ ರಮ್ಯಾ ಸಹ ಹೊರತಾಗಿಲ್ಲ. ಬೆಂಗಳೂರಿನ ಲೆವೆಲ್ಲೆ ರಸ್ತೆಯಲ್ಲಿ ಭವ್ಯವಾದ ಮನೆಯೊಂದನ್ನು ಕಟ್ಟಿಸಿದ್ದಾರೆ. ನಾಲ್ಕು ಬೆಡ್ ರೂಂಗಳನ್ನೊಳಗೊಂಡ ಮನೆಗೆ ಗುರುವಾರ (ಜೂ.24) ರಮ್ಯಾ ಗೃಹ ಪ್ರವೇಶ ಮಾಡಿದರು.

ಈ ಮನೆಯನ್ನು ರಮ್ಯಾ ವಾಸ್ತು ಪ್ರಕಾರ ಕಟ್ಟಿಸಿರುವುದು ವಿಶೇಷ. ಅಮ್ಮನಿಗೊಂದು ಚೆಂದದ ಮನೆ ಕಟ್ಟಿಸಿಕೊಡಬೇಕೆಂಬುದು ರಮ್ಯಾ ಅವರ ಬಹುದಿನಗಳ ಕನಸಾಗಿತ್ತು. ಈ ಕನಸು ಕಡೆಗೂ ಕೈಗೂಡಿದೆ.ಕಾಕತಾಳಿಯವೆಂಬಂತೆ ರಮ್ಯಾ ಗೃಹ ಪ್ರವೇಶ ಮಾಡಿದ ದಿನವೇ ಅವರ ಹೊಸ ಚಿತ್ರ 'ದಂಡಂ ದಶಗುಣಂ' ಸಹ ಸೆಟ್ಟೇರಿದೆ.

ಹೊಸ ಮನೆಯ ವಾತಾವರಣ ರಮ್ಯಾ ಅವರಿಗೆ ಸಖತ್ ಇಷ್ಟವಾಗಿದೆಯಂತೆ. ಮನೆಯ ಸನಿಹದಲ್ಲೇ ಬ್ಯಾಂಕು, ಜಿಮ್,ಕ್ಲಬ್ ಗಳು ಇರುವುದು ರಮ್ಯಾಗೆ ಖುಷಿಯಾಗಿದೆಯಂತೆ. ಆದರೆ ಮನೆ ಕಟ್ಟಿಸಿರುವ ಕಾರಣ ಹಣವೆಲ್ಲಾ ಖರ್ಚಾಗಿ ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗಿದೆ ಎನ್ನುತ್ತಾರೆ ರಮ್ಯಾ.

ಸಿನಿಮಾ ಚಿತ್ರೀಕರಣದಲ್ಲೇ ಇರುವ ಕಾರಣ ಹೆಚ್ಚಿನ ಸಮಯವನ್ನು ಮನೆಯಲ್ಲಿ ಕಳೆಯಲು ಸಾಧ್ಯವಾಗುವುದಿಲ್ಲ. ಹೊಸ ಮನೆಯಲ್ಲಿ ಹೆಚ್ಚಿನ ಸಮಯ ಕಳೆಯಬೇಕೆಂಬುದು ನನ್ನ ಆಸೆ. ಆದರೆ ಅದು ಸಾಧ್ಯವಾಗದೆ ಇರುವ ಬಗ್ಗೆ ನನಗೆ ಬೇಸರವಿದೆ ಎಂಬುದು ರಮ್ಯಾ ಅವರ ಅಳಲು. ಅಂದಹಾಗೆ ಲೆವೆಲ್ಲೆ ರಸ್ತೆಯಲ್ಲಿ ಚದರ ಅಡಿ ಭೂಮಿ ಬೆಲೆ ರು.14,500 ಅಂತೆ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada