»   » ಸುದೀಪ್ ಓನ್ಲಿ ವಿಷ್ಣುವರ್ಧನ ಅರ್ಧ ಶತಕ ನಾಟೌಟ್

ಸುದೀಪ್ ಓನ್ಲಿ ವಿಷ್ಣುವರ್ಧನ ಅರ್ಧ ಶತಕ ನಾಟೌಟ್

Posted By:
Subscribe to Filmibeat Kannada

ಸುದೀಪ್ ಅಭಿನಯದ 'ವಿಷ್ಣುವರ್ಧನ' ಚಿತ್ರ ನಿರೀಕ್ಷೆಯಂತೆ ಅರ್ಧ ಶತಕ ಭಾರಿಸಿದೆ. ಇನ್ನೇನಿದ್ದರೂ ಶತಕ ಬಾರಿಸುವುದೊಂದೇ ಬಾಕಿ ಇದೆ. ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲೂ 'ವಿಷ್ಣುವರ್ಧನ' ಗಟ್ಟಿಯಾಗಿ ಕಚ್ಚಿಕೊಂಡು ಬಾಕ್ಸಾಫೀಸ್‌ನಲ್ಲಿ ಪೈಸಾ ವಸೂಲ್ ಮಾಡುತ್ತಿದೆ.

ಪ್ರಚಂಡ ಕುಳ್ಳ ದ್ವಾರಕೀಶ್ ಈ ಚಿತ್ರದ ಮೂಲಕವೂ ಗೆಲುವಿನ ನಗೆ ಬೀರಿದ್ದಾರೆ. ಪಿ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಭಾವನಾ, ಪದ್ಮಪ್ರಿಯಾ ಹಾಗೂ ಸೋನು ಸೂದ್ ಅಭಿನಯಿಸಿದ್ದಾರೆ. ಸಾಲು ಸಾಲು ಸೋಲುಗಳನ್ನು ಕಾಣುತ್ತಿದ್ದ ಕನ್ನಡ ಚಿತ್ರೋದ್ಯಮಕ್ಕೆ 'ವಿಷ್ಣುವರ್ಧನ' ಚಿತ್ರ ಹೊಸ ಆರ್ಥಿಕ ಶಕ್ತಿ ತಂದಿದೆ ಎನ್ನಬಹುದು.

ಇನ್ನೊಂದು ವಿಶೇಷ ಎಂದರೆ ವಿಷ್ಣುವರ್ಧನ ಚಿತ್ರ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ರೀಮೇಕ್ ಆಗಲು ಹೊರಟಿದೆ. ಈ ಒಟ್ಟಾರೆ ಬೆಳವಣಿಗೆಯಿಂದ ಕನ್ನಡ ಚಿತ್ರರಂಗದ ಕಡೆಗೆ ನೆರೆಹೊರೆಯ ಚಿತ್ರೋದ್ಯಮಗಳು ಕಣ್ಣು ಬಾಯಿ ಬಿಟ್ಟುಕೊಂಡು ನೋಡುವಂತಾಗಿದೆ. (ಏಜೆನ್ಸೀಸ್)

English summary
Sudeep lead Kannada movie Vishnuvardhana completes 50 days and running successfully in all the theatres. Directed by P.Kumar and produced by Dwarakish, the movie also stars Bhavana, Priyamani and Sonu Sood.
Please Wait while comments are loading...