For Quick Alerts
  ALLOW NOTIFICATIONS  
  For Daily Alerts

  'ನಾರಿಯ ಸೀರೆ ಕದಿ'ಯಲು ಬರುತ್ತಿದ್ದಾರೆ ಕ್ರೇಜಿಸ್ಟಾರ್

  By Rajendra
  |

  ಪ್ರೇಕ್ಷಕರ ಮನಸ್ಸನ್ನು ಕದಿಯಲು ಬರುತ್ತಿದೆ ಈ ವಾರ ತೆರೆಗೆ ಬರುತ್ತಿದ್ದಾನೆ (ನ.26) 'ನಾರಿಯ ಸೀರೆ ಕದ್ದ'.ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರು ಈ ಚಿತ್ರದಲ್ಲಿ ಹಾಡೊಂದನ್ನು ನಿರ್ದೇಶಿಸುವುದರೊಂದಿಗೆ ಸಾಹಿತ್ಯ ಹಾಗೂ ಸಂಗೀತ ಸಹ ಒದಗಿಸಿದ್ದಾರೆ. ಮಿಕ್ಕ ಎಲ್ಲಾ ಹಾಡುಗಳಿಗೆ ವಿ.ಮನೋಹರ್ ಅವರ ಸಾಹಿತ್ಯ, ಸಂಗೀತವಿದೆ.

  ಗೌತಮಿ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಡಿ.ಬಿ. ಕುಮಾರಸ್ವಾಮಿ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವೈ. ಶ್ರೀನಿವಾಸ್ ಕಾರ್ಯಕಾರಿ ನಿರ್ಮಾಪಕರು.ಬಿ.ಎಂ.ಪಿ ಅಣ್ಣಯ್ಯ ಅವರು ಕಥೆ, ಚಿತ್ರಕಥೆ ಬರೆದಿದ್ದಾರೆ. ಸೀಂಗೀತಂ ಶ್ರೀನಿವಾಸರಾವ್, ಎಂ.ಎಸ್. ರಾಜಶೇಖರ್ ರಂಥ ಹಿರಿಯ ನಿರ್ದೇಶಕರ ಬಳಿ ಸಹ ನಿರ್ದೇಶಕರಾಗಿ ಹಾಗೂ ಹೆಚ್ಚಾಗಿ ಡಾ.ರಾಜ್‌ಕುಮಾರ್ ಬ್ಯಾನರ್‌ನ ಚಿತ್ರಗಳಿಗೇ ಕೆಲಸ ಮಾಡಿ ಅನುಭವ ಪಡೆದ ಅಣ್ಣಯ್ಯ ಅವರ ನಿರ್ದೇಶನದ ಚಿತ್ರವಿದು.

  'ನಾರಿಯ ಸೀರೆ ಕದ್ದ' ಕಾಮಿಡಿ ಹಾಗೂ ಮನರಂಜನೆಗೆ ಒತ್ತುಕೊಟ್ಟು 45 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮಾಡಿದ್ದಾರೆ. ನಟ, ನಿರ್ದೇಶಕ ಮೋಹನ್ ಚಿತ್ರಕಥೆ, ಸಂಭಾಷಣೆ ಹೆಣೆದಿದ್ದಾರೆ. ವಿಷ್ಣುವರ್ಧನ್‌ರ ಛಾಯಗ್ರಹಣ ಹಾಗೂ ಸಂಜೀವರೆಡ್ಡಿ ಅವರ ಸಂಕಲನ ಇದ್ದು, ರವಿಚಂದ್ರನ್, ನಿಖಿತಾ, ನವೀನ್ ಕೃಷ್ಣ, ಶುಭಾ ಪುಂಜಾ, ಹಾಗೂ ದತ್ತಣ್ಣ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

  'ನಾರಿಯ ಸೀರೆ ಕದ್ದ... ಜಸ್ಟ್ ಎಂಟರ್‌ಟೈನ್‌ಮೆಂಟ್' ಎಂಬ ಅಡಿ ಬರಹ ಇರುವ ಸಂಪೂರ್ಣ ಮನರಂಜನಾತ್ಮಕ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ ನೀಡಿದೆ. ಈ ಚಿತ್ರವು ಕರ್ನಾಟಕದಾದ್ಯಂತ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ.

  English summary
  Crazy star V Ravichandran"s latest flick "Nariya Seere Kaddha" to hit the screen on Nov 26. Nikita Thukral plays opposite to Ravichandran. Shuba Poonja, Dattanna, Naveen Krishna are also in the cast.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X