For Quick Alerts
  ALLOW NOTIFICATIONS  
  For Daily Alerts

  ಓಂ, ರಾಕ್ ಮತ್ತೆ ಒಂದಾದ ಡಕೋಟ ಎಕ್ಸ್‌ಪ್ರೆಸ್ ಜೋಡಿ

  By Rajendra
  |

  ಕನ್ನಡದ 'ಡಕೋಟ ಎಕ್ಸ್‌ಪ್ರೆಸ್' ಜೋಡಿ ಓಂ ಪ್ರಕಾಶ್‌ರಾವ್ ಮತ್ತು ರಾಕ್‌ಲೈನ್ ವೆಂಕಟೇಶ್ ಸದ್ಯದಲ್ಲೇ ಒಂದಾಗಿ ತೆರೆಯ ಮೇಲೆ ಬರುತ್ತಿದ್ದಾರೆ. 'ಡಕೋಟ ಎಕ್ಸ್‌ಪ್ರೆಸ್‌'ನಂತರ ಈ ಜೋಡಿ ಒಟ್ಟಾಗಿ ನಟಿಸಿಲ್ಲ. 'ಕಾಮಣ್ಣನ ಮಕ್ಕಳು' ಚಿತ್ರದಲ್ಲಿ ರಾಕ್‌ಲೈನ್ ನಟಿಸಿದರಾದರೂ ಓಂ ಪ್ರಕಾಶ್ ನಿರ್ದೇಶನದಲ್ಲಿ ಬ್ಯುಸಿಯಾಗಿಬಿಟ್ಟರು.

  ಸದ್ಯ ತಮಿಳು ಚಿತ್ರದ ರೀಮೇಕ್‌ವೊಂದರಲ್ಲಿ ಮತ್ತೆ ಈ ಜೋಡಿ ಒಂದಾಗಿ ಕಾಣಿಸಿಕೊಳ್ಳಲಿದೆ. ರಾಕ್‌ಲೈನ್ ಮಾಲ್, ಸಿನಿಮಾಸ್ ಎಂದು ಬ್ಯುಸಿಯಾಗಿದ್ದ ರಾಕ್‌ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅವರೇ ನಾಯಕರು. ಹೀರೋ ಸ್ನೇಹಿತವಾಗಿ ಓಂ ಪ್ರಕಾಶ್‌ರಾವ್ ನಟಿಸುತ್ತಿದ್ದಾರೆ.

  ಚಿತ್ರವನ್ನು ಯಾರು ನಿರ್ದೇಶಿಸುತ್ತಿದ್ದಾರೆ? ನಾಯಕಿ ಯಾರು? ಉಳಿದ ತಂತ್ರಜ್ಞರು ಯಾರು? ಎಂಬ ಸರಣಿ ಪ್ರಶ್ನೆಗಳಿಗೆ ಇನ್ನೂ ಉತ್ತರಸಿಕ್ಕಿಲ್ಲ. ಮಾರ್ಚ್ ಕೊನೆಯ ವೇಳೆಗೆ ಚಿತ್ರ ಸೆಟ್ಟೇರುವುದಂತೂ ಖಚಿತವಾಗಿದೆ. ಒಟ್ಟಿನಲ್ಲಿ ಈ ಜೋಡಿ ಮತ್ತೆ ತೆರೆಯ ಮೇಲೆ ಮೋಡಿ ಮಾಡಲಿದೆಯೇ ಕಾದು ನೋಡೋಣ. (ಒನ್‌ಇಂಡಿಯಾ ಕನ್ನಡ)

  English summary
  Director Om Prakash Rao and Rockline Venkatesh team-up again in Tamil remade untitled film. Buzz is that the two are coming together again. The movie suppose to launch in the month of March. Earlier the duo acted in a comedy movie 'Dakota Express'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X