»   » ಕನಸಿನೊಂದಿಗೆ ಪ್ರಕಾಶ್ ರೈ ರಾಜ್ಯದಾದ್ಯಂತ ಪ್ರವಾಸ

ಕನಸಿನೊಂದಿಗೆ ಪ್ರಕಾಶ್ ರೈ ರಾಜ್ಯದಾದ್ಯಂತ ಪ್ರವಾಸ

Posted By:
Subscribe to Filmibeat Kannada

ಚೊಚ್ಚಲ ಕನಸಿನ ಸಂಭ್ರಮದಲ್ಲಿರುವ ಪ್ರಕಾಶ್ ರೈ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ರೈ ಮೊದಲ ನಿರ್ದೇಶನದಲ್ಲಿ ಮೂಡಿಬಂದ 'ನಾನು ನನ್ನ ಕನಸು' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಚಿತ್ರವನ್ನು ಮತ್ತಷ್ಟು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.

'ನಾನು ನನ್ನ ಕನಸು' ಚಿತ್ರದ ಬಗ್ಗೆ ಇತ್ತೀಚೆಗೆ ನಡೆದ ಸಂವಾದ ಪ್ರೇಕ್ಷಕರ ನಾಡಿಮಿಡಿತವನ್ನು ಅರಿಯುವಲ್ಲಿ ಪ್ರಕಾಶ್ ರೈಗೆ ಸಹಕರಿಸಿದೆ. ಮುಖ್ಯವಾಗಿ ಯುವ ಜನಾಂಗ ಸಂವಾದ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಭಾಗವಹಿಸಿತ್ತು. ಪಂಜಾಬಿ ಕುಟುಂಬ ಹಾಗೂ ಹಿರಿಯರೂ ಸಹ ಆಗಮಿಸಿದ್ದದ್ದು ಅವರ ಉತ್ಸಾಹವನ್ನು ಇಮ್ಮಡಿಸಿದೆಯಂತೆ.

ಹೊಸ ಹೊಸ ಚಿತ್ರಗಳು ತೆರೆಗೆ ಬರುತ್ತಿದ್ದರೂ 'ಕನಸು' ಚಿತ್ರ ಮಾತ್ರ ಬಾಕ್ಸಾಫೀಸಲ್ಲಿ ತನ್ನ ಹಿಡಿತವನ್ನು ಬಿಟ್ಟುಕೊಟ್ಟಿಲ್ಲ. ಪ್ರೇಕ್ಷಕರ ಪ್ರತಿಕ್ರಿಯೆ ತಿಳಿಯಲು ಇತ್ತೀಚೆಗೆ ಅವರು ಮೈಸೂರಿನ ಚಿತ್ರಮಂದಿರ ಒಂದಕ್ಕೆ ಭೇಟಿ ನೀಡಿದ್ದರು. ಹಾಸನ, ದಾವಣಗೆರೆ ಮತ್ತು ಶಿವಮೊಗ್ಗಕ್ಕೂ ಪ್ರಕಾಶ್ ರೈ ಪಯಣ ಸಾಗಲಿದೆ. ಮುಂಬರುವ ದಿನಗಳಲ್ಲಿ ಬೆಳಗಾವಿ, ಹುಬ್ಬಳ್ಳಿ ಮತ್ತು ಗದಗ ಜಿಲ್ಲೆಗಳು 'ಕನಸಿ'ನ ತಂಡದೊಂದಿಗೆ ಭೇಟಿ ನೀಡಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada