»   » ಪುನೀತ್ ಅಣ್ಣಾಬಾಂಡ್ ಬಿಡುಗಡೆ ಡೇಟ್ ಘೋಷಣೆ

ಪುನೀತ್ ಅಣ್ಣಾಬಾಂಡ್ ಬಿಡುಗಡೆ ಡೇಟ್ ಘೋಷಣೆ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಣ್ಣಾ ಬಾಂಡ್' ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ದೌಟ್ ಕಡೆಗೂ ಬಗೆಹರಿದಿದೆ. ದುನಿಯಾ ಸೂರಿ ನಿರ್ದೇಶನದ ಈ ಚಿತ್ರ ಏಪ್ರಿಲ್ 19ಕ್ಕೆ ಬಿಡುಗಡೆಯಾಗುತ್ತದೋ ಅಥವಾ ಏಪ್ರಿಲ್ 26ಕ್ಕೋ ಎಂಬ ಅನುಮಾನ ಅವರ ಅಪಾರ ಅಭಿಮಾನಿ ಬಳಗದ ತಲೆ ಕೊರೆಯುತ್ತಿತ್ತು.

ಈಗ ಸ್ವತಃ ಚಿತ್ರತಂಡ 'ಅಣ್ಣಾ ಬಾಂಡ್' ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಚಿತ್ರ ಏ.24ಕ್ಕೆ ತೆರೆಗೆ ದಾಳಿ ಮಾಡುತ್ತಿರುವುದಾಗಿ ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಬಹಿರಂಗಪಡಿಸಿದೆ. ಏ.24ರಂದು ವರನಟ ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬ. ಅಭಿಮಾನಿಗಳಿಗೆ ಡಬಲ್ ಸಂಭ್ರಮ ಅಲ್ಲವೆ?

ಒನ್‌ಇಂಡಿಯಾ ಕನ್ನಡ ಸಿನಿ ಡೆಸ್ಕ್ ಈ ಹಿಂದೆಯೇ 'ಅಣ್ಣಾ ಬಾಂಡ್' ಬಿಡುಗಡೆ ಬಗ್ಗೆ ಸುಳಿವು ನೀಡಿತ್ತು. ಅಣ್ಣಾವ್ರ ಹುಟ್ಟುಹಬ್ಬಕ್ಕೆ ಅಣ್ಣಾ ಬಾಂಡ್ ತೆರೆಗೆ ಅಪ್ಪಳಿಸಲಿದೆ ಎಂದು ತಿಳಿಸಿದ್ದೆವು. ಈಗ ಆ ಸುದ್ದಿ ಅಧಿಕೃತವಾಗಿ ಘೋಷಣೆಯಾಗಿದೆ. ಚಿತ್ರದ ಸಂಕಲನ ಬಹುತೇಕ ಮುಗಿದಿದ್ದು, ಡಿಟಿಎಸ್ ಅಳವಡಿಕೆ ಹಾಗೂ ಗ್ರಾಫಿಕ್ಸ್ ಕೆಲಸ ಭರದಿಂದ ಸಾಗುತ್ತಿದೆ. (ಒನ್‍ಇಂಡಿಯಾ ಕನ್ನಡ)

English summary
Power Star Puneeth Rajkumar, Priyamani and Nidhi Subbaiah lead Kannada movie Anna Bond release date confirmed. Duniya Soori directed much expected movie all set to releasing on the eve of Kannada movie icon Dr. Raj Kumar’s birthday on April 24.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X