»   » ಕೆಎಂಎಫ್ ನೂತನ ರಾಯಭಾರಿ ಪುನೀತ್

ಕೆಎಂಎಫ್ ನೂತನ ರಾಯಭಾರಿ ಪುನೀತ್

Subscribe to Filmibeat Kannada

ಕೆ ಎಂ ಎಫ್ ಅಧ್ಯಕ್ಷ ಜಿ.ಸೊಮಶೇಖರ್ ಅವರ ಆಸೆ ಕಡೆಗೂ ಕೈಗೂಡಿದೆ. ನಂದಿನಿ ಹಾಲೂ ಹಾಗೂ ಅದರ ಉತ್ಪನ್ನಗಳಿಗೆ ರಾಯಭಾರಿಯಾಗಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಈ ಹಿಂದೆ ಕೆಎಂಎಫ್ ಉತ್ಪನ್ನಗಳಿಗೆ ರಿಯಲ್ ಸ್ಟಾರ್ ಉಪೇಂದ್ರ ರಾಯಭಾರಿಯಾಗಿದ್ದರು.

ಗುರುವಾರ ಸಂಜೆ ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೆ ತೆರಳಿದ ಸೋಮಶೇಖರ್ ರೆಡ್ಡಿ, ನಂದಿನಿ ಹಾಲೂ ಹಾಗೂ ಅದರ ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿ ಜಾಹೀರಾತು ನೀಡುವಂತೆ ಮಾಡಿದ ಮನವಿಗೆ ಪುನೀತ್ ಒಪ್ಪಿಗೆ ನೀಡಿದ್ದಾರೆ.

ವರನಟ ಡಾ.ರಾಜ್ ಕುಮಾರ್ ಅವರು 13 ವರ್ಷಗಳ ಹಿಂದೆ ಕೆ ಎಂ ಎಫ್ ಉತ್ಪನ್ನಗಳ ರಾಯಭಾರಿ ಆಗಿದ್ದರು. ರೈತ ಬಾಂಧವರ ಸಂಸ್ಥೆ ಕೆ ಎಂ ಎಫ್ ಉತ್ಪನ್ನಗಳಿಗೆ ಉಚಿತವಾಗಿ ಪ್ರಚಾರ ನೀಡಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ರಾಜ್ ಅವರ ಮೊದಲ ಹಾಗೂ ಕಡೆಯ ಜಾಹೀರಾತು ಇದಾಗಿತ್ತು ಎಂಬುದು ಗಮನಾರ್ಹ ಅಂಶ.

ಜನವರಿಯಿಂದ ನಂದಿನಿ ಉತ್ಪನ್ನಗಳ ಜಾಹೀರಾತು ಚಿತ್ರೀಕರಣ ನಡೆಯಲಿದೆ. ತದನಂತರ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪುನೀತ್ ರೂಪದರ್ಶಿಯಾಗಿ ನಂದಿನಿ ಜಾಹೀರಾತುಗಳು ಪ್ರಸಾರವಾಗಲಿವೆ. ಒಟ್ಟಾರೆಯಾಗಿ ಗೋವಿನಿಂದ ಗ್ರಾಹಕರವರೆಗೆ ಗುಣಮಟ್ಟದ ಉತ್ಕೃಷ್ಟತೆಯನ್ನು ಕಾದುಕೊಂಡಿರುವ ನಂದಿನಿ ಹಾಲಿಗೆ ನೂತನ ರಾಯಭಾರಿ ಸಿಕ್ಕಂತಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada