»   »  ಪುನೀತ್ ಅಭಿಮಾನಿಗಳ ಸಂಘಕ್ಕೆ ವಿದ್ಯುಕ್ತಚಾಲನೆ

ಪುನೀತ್ ಅಭಿಮಾನಿಗಳ ಸಂಘಕ್ಕೆ ವಿದ್ಯುಕ್ತಚಾಲನೆ

Subscribe to Filmibeat Kannada
Puneeth Rajkumar Fans association formed
ಕನ್ನಡ ಚಿತ್ರರಂಗದ ಬಾಕ್ಸಾಫೀಸ್ ಕಿಂಗ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘ ವಿದ್ಯುಕ್ತವಾಗಿ ಆರಂಭವಾಗಿದೆ. ಕನ್ನಡ ಚಿತ್ರರಂಗ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಪುನೀತ್ ಅಭಿಮಾನಿಗಳ ಸಂಘ ಚಾಲನೆ ಪಡೆದುಕೊಂಡು ಪುನೀತ್ ಸಂತೋಷವನ್ನು ಹಿಮ್ಮಡಿಸಿದೆ.

ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಅಖಿಲ ಕರ್ನಾಟಕ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘವನ್ನು ಉದ್ಘಾಟಿಸಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್, ಗೋಲ್ಡನ್ ಸ್ಟಾರ್ ಗಣೇಶ್, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್ ಹೀಗೆ ಎಲ್ಲ ನಾಯಕ ನಟರಿಗೂ ಅಭಿಮಾನಿ ಸಂಘಗಳಿವೆ. ಸದ್ದೇ ಮಾಡದ ಸುದೀಪ್ ಅವರಿಗೂ ಅಭಿಮಾನಿ ಸಂಘವಿದೆ. ಆಗಾಗ ಸದ್ದು ಮಾಡುವ ವಿಷ್ಣು ಸೇನೆಯೂ ಇದೆ.

ಆಯಾ ನಟರ ಹುಟ್ಟುಹಬ್ಬ ದಿನ ಅಭಿಮಾನಿಗಳು ರಕ್ತದಾನ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆಯಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಆದರೆ ಆರಂಭದಲ್ಲಿದ್ದ ಉತ್ಸಾಹ ಕ್ರಮೇಣ ಕಡಿಮೆಯಾಗಿ ಅಭಿಮಾನಿ ಸಂಘಗಳು ಕಣ್ಮರೆಯಾಗುತ್ತವೆ. ಅಖಿಲ ಕರ್ನಾಟಕ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗಾಗದಿರಲಿ ಎಂದುಬುದೇ ನಮ್ಮ ಹಾರೈಕೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಲಗೋರಿ ಆಟ ರದ್ದಾಗಿ ಪುನೀತ್ ಬೆಲೆ ಹೆಚ್ಚಾಗಿದೆ
ರೀಮೇಕ್ ಚಿತ್ರದಲ್ಲಿ ರಾಮ್ ನಾಗಿ ಪುನೀತ್
ರಾಜ್ ನಲ್ಲಿ ಬೆಳ್ಳಿತೆರೆಯ ಬಂಗಾರಿಯರ ಥೈಥೈ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada