»   »  'ರಾಜ್'ಮೊದಲ ವಾರದ ಗಳಿಕೆ ರು.6 ಕೋಟಿ

'ರಾಜ್'ಮೊದಲ ವಾರದ ಗಳಿಕೆ ರು.6 ಕೋಟಿ

Posted By:
Subscribe to Filmibeat Kannada

ರಾಜ್ ಶೋ ಮ್ಯಾನ್ ಚಿತ್ರದ ಮೊದಲ ವಾರದ ಗಳಿಕೆ ಎಷ್ಟು? ''ಚಿತ್ರ ಎಷ್ಟು ಹಣ ಗಳಿಸಿದೆ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ.ಚಿತ್ರ ಬಿಡುಗಡೆಯಾಗಿರುವ 101 ಕೇಂದ್ರದಲ್ಲಿ 31 ಲಕ್ಷ ಜನ ರಾಜ್ ನೋಡಿ ಆನಂದಿಸಿದ್ದಾರೆ '' ಎನ್ನುತ್ತಾರೆ ನಿರ್ದೆಶಕ ಪ್ರೇಮ್.

ಚಿತ್ರಕ್ಕೆ ಈ ಪಾಟಿ ಪ್ರತಿಕ್ರಿಯೆ ವ್ಯಕ್ತವಾಗಲು ಪುನೀತ್ ರಾಜ್ ಕುಮಾರ್ ಅವರೇ ಕಾರಣ ಎಂಬ ಮಾತನ್ನ್ನು ಪ್ರೇಮ್ ಒಪ್ಪುತ್ತಾರೆ. ಆದರೆ ಒಂದು ವಾರದಲ್ಲಿ ಚಿತ್ರ ಎಷ್ಟು ಹಣ ಗಳಿಸಿದೆ ಎಂಬುದು ಮುಖ್ಯವಲ್ಲ ಎನ್ನುವ ಪ್ರೇಮ್, ಮೊದಲ ವಾರದ ಗಳಿಕೆ ರು.6 ಕೋಟಿ ಮೀರಿದೆ ಎಂಬುದನ್ನು ಎದೆ ತಟ್ಟ್ಟಿ ಹೇಳುತ್ತಾರೆ.

ಬಳ್ಳಾರಿಯ ಎರಡು ಚಿತ್ರಮಂದಿರಗಳಲ್ಲಿ ಇದುವರೆಗೂ ರಾಜ್ 13 ಪ್ರದರ್ಶನಗಳನ್ನು ಕಂಡಿದೆ. ಗಳಿಕೆ ವಿಚಾರವಾಗಿ ಮೂರು ದಿನಗಳ ಕಾಲ ನಾನು ಯಾರೊಂದಿಗೂ ಮಾತನಾಡಿಲ್ಲ. ನೂರು ದಿನಗಳ ಗಳಿಕೆಯನ್ನು ರಾಜ್ ಕೇವಲ ಒಂದು ವಾರದಲ್ಲೇ ಗಳಿಸಿದೆ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ ಎನ್ನುತ್ತಾರೆ ಪ್ರೇಮ್.

ರಾಜ್ ಚಿತ್ರದ ಮೂಲಕ ಪುನೀತ್ ಸಹ ಏರಿಳಿಕೆ ಕಂಡಿದ್ದಾರೆ. ಚಿತ್ರಕ್ಕೆ ವ್ಯಕ್ತವಾಗಿರುವ ಋಣಾತ್ಮಕ ಪ್ರತಿಕ್ರಿಯೆಗಿಂತ ಧನಾತ್ಮಕ ಪ್ರತಿಕ್ರಿಯೆ ಹೆಚ್ಚು ಖುಷಿ ಕೊಟ್ಟಿದೆ. ಚಿತ್ರದ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ. ಪ್ರೇಕ್ಷಕರು ಒಂಚೂರು ನಿರಾಶರಾಗಿದ್ದನ್ನು ಬಿಟ್ಟರೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತ್ತಾರೆ ಪುನೀತ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada