»   » ನಮ್ಮ ಪಲ್ಲವಿಗೆ ಮಾತೇ ಬಂಗಾರ ಮೌನ ಏನಿದ್ದರೂ ಬೆಳ್ಳಿ

ನಮ್ಮ ಪಲ್ಲವಿಗೆ ಮಾತೇ ಬಂಗಾರ ಮೌನ ಏನಿದ್ದರೂ ಬೆಳ್ಳಿ

Posted By:
Subscribe to Filmibeat Kannada

ಬೆಳಗಿನ ಏಳು ಗಂಟೆ ನಿಮ್ಮ ತಿಂಡಿ ಸಮಯವಾಗಿದ್ದರೆ ಒಮ್ಮೆ 93.5 ರೆಡ್ ಎಫ್ ಎಂ ಚಾಲು ಮಾಡಿ ನೊಡಿ. ಆರ್ ಜೆ ಪಲ್ಲವಿ ಮಾತುಗಳು ಹೂ ಬಾಣಗಳಂತೆ ಕಿವಿಗೆ ನಾಟುತ್ತವೆ. ಆಕೆಯ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನಿಮ್ಮ ತಟ್ಟೆ ಖಾಲಿಯಾಗಿವುದು ಗೊತ್ತೆ ಆಗುವುದಿಲ್ಲ.

ಪಲ್ಲವಿ ಮಾತುಗಳನ್ನು ಕೇಳುತ್ತಿದ್ದರೆ ಕೇಳುಗರು ಮೂಕ ವಿಸ್ಮಿತರಾಗುತ್ತಾರೆ. ಹಾಸ್ಯಭರಿತ ಮಾತಿನ ವರಸೆಗಳು ಶ್ರೋತೃಗಳಿಗೆ ಕಚಗುಳಿಯಿಡುತ್ತವೆ. ಕೆಲವೊಮ್ಮೆ ಕಾಡುತ್ತದೆ, ಯೋಚನೆಗೆ ಹಚ್ಚುತ್ತವೆ. ತೆರೆದೆ ಕಿವಿಗಳಿಂದ ಕೇಳಿಸಿಕೊಳ್ಳಬೇಕಷ್ಟೆ. ಶ್ರೋತೃಗಳಷ್ಟೇ ಅಲ್ಲ ಪಲ್ಲವಿ ಮಾತಿನ ಬಲೆಗೆ ಬಿದ್ದ ಅದೆಷ್ಟೋ ಕನ್ನಡ ಸಿನಿಮಾ ತಾರೆಗಳು ಇಂಗು ತಿಂಗ ಮಂಗನಂತಾಗಿದ್ದಾರೆ.

ನಮ್ಮ ಪಲ್ಲವಿಗೆ ಮಾತೇ ಬಂಗಾರ ಮೌನ ಏನಿದ್ದರೂ ಬೆಳ್ಳಿ ಇದ್ದಂತೆ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬಂತೆ ಪಲ್ಲವಿದು ಒಂದೇ ಖಡಕ್ ಮಾತು ಅದೇ ಆಕೆಯ ಸಂಪತ್ತು. ಮಾತಿನ ಜೊತೆ ಸಿನಿಮಾಗಳನ್ನು ನೋಡುವ ಹುಚ್ಚು ಇದೆ. ಪ್ರತಿ ಪ್ರೀಮಿಯರ್ ಶೋಗೂ ಆಕೆ ತಪ್ಪದೆ ಹಾಜರಾಗುತ್ತಾರೆ. ಅಲ್ಲಿ ಸಿಕ್ಕ ತಾರೆಗಳನ್ನು ತಮ್ಮ ಮಾತಿನ ಮೂಲಕ ಇಕ್ಕಟ್ಟಿಗೆ ಸಿಲುಕಿಸುತ್ತಾರೆ.

ಕ್ರಿಕೆಟ್ ಎಂದರೆ ಪಲ್ಲವಿಗೆ ಮಾತೇ ಹೊರಡದಷ್ಟು ಇಷ್ಟ. ಅದರಲ್ಲೂ ರಾಹುಲ್ ದ್ರಾವಿಡ್ ಆಡುತ್ತಿದ್ದಾರೆ ಅಂದ್ರೆ ಕೇಳುವಂತೆಯೇ ಇಲ್ಲ. ರಾಹುಲ್ ನ ಸಂದರ್ಶನ ಮಾಡಲು ಉರಿಬಿಸಿಲಿನಲ್ಲಿ ಆರು ಗಂಟೆಗೂ ಹೆಚ್ಚು ಹೊತ್ತು ಕಾದಿದ್ದರು ಎಂದರೆ ನೀವೇ ಊಹಿಸಿ ಆಕೆಯ ಕ್ರೀಡಾಭಿಮಾನ ಎಂತಹದು ಅಂತ.

ಇಷ್ಟೆಲ್ಲಾ ವಿಶೇಷಗಳಿರುವ ರೇಡಿಯೋ ಜಾಕಿ ಪಲ್ಲವಿ ಬೆಂಗಳೂರಿನ ಅತ್ಯಂತ ಸ್ಟೈಲಿಶ್ ಆರ್ ಜೆ ಎಂಬ ಹೆಗ್ಗಳಿಗೆ ಪಾತ್ರವಾಗಿದ್ದಾರೆ. Fashion @ Big bazaarನಲ್ಲಿ ನಡೆದ ಆರ್ ಜೆಗಳ ಸ್ಪರ್ಧೆಯಲ್ಲಿ ಪಲ್ಲವಿ ಮಾತಿನ ವರಸೆಗಳ ಮೂಲಕ ತೀರ್ಪುಗಾರರ ಮನಗೆದ್ದಿದ್ದಾರೆ. ಆಕೆಯ ಕೊರಳಿಗೆ ಬೆಂಗಳೂರಿನ ಅತ್ಯಂತ ಸ್ಟೈಲಿಶ್ ಆರ್ ಜೆ ಎಂಬ ಮಾಲೆ ಬಿದ್ದಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada