»   »  ಶರಣ್ ಕಬ್ಬೂರರ ಹೊಸ ಮಾನಸ ಸರೋವರ ಚಿತ್ರ

ಶರಣ್ ಕಬ್ಬೂರರ ಹೊಸ ಮಾನಸ ಸರೋವರ ಚಿತ್ರ

Subscribe to Filmibeat Kannada

ಪುಟ್ಟಣ್ಣ ಕಣಗಾಲರ 'ಮಾನಸ ಸರೋವರ' ಚಿತ್ರವನ್ನು ಮರೆಯಲು ಸಾಧ್ಯವೆ?1982ರಲ್ಲಿ ತೆರೆಕಂಡಿದ್ದ ಚಿತ್ರದಲ್ಲಿ ಶ್ರೀನಾಥ್, ಪದ್ಮವಾಸಂತಿ, ರಾಮಕೃಷ್ಣ ಮೊದಲಾದವರ ಅಮೋಘ ನಟನೆ ಜನ ಮಾನಸ ಗೆದ್ದಿತ್ತು. ಈಗ ಅದೇ ಹೆಸರಿನ ಮತ್ತೊಂದು ಚಿತ್ರವೊಂದು ಸೆಟ್ಟೇರಲಿದೆ.

ಶರಣ್ ಕಬ್ಬೂರು ನಿರ್ದೇಶಿಸುತ್ತಿರುವ ತಮ್ಮ ಚಿತ್ರಕ್ಕೆ 'ಮಾನಸ ಸರೋವರ' ಎಂದು ಶೀರ್ಷಿಕೆ ಇಟ್ಟಿದ್ದಾರೆ. ಪ್ರೇಮಾಯಣ, ಗೆಜ್ಜೆ, ಜಿಂಕೆ ಮರೀನಾ...ಮುಂತಾದ ಹೆಸರುಗಳು ಸಂಭಾವ್ಯ ಶೀರ್ಷಿಕೆ ಪಟ್ಟಿಯಲ್ಲಿದ್ದವು. ಕಡೆಗೆ ಮಾನಸ ಸರೋವರ ಶೀರ್ಷಿಕೆಯನ್ನು ಅಂತಿಮಗೊಳಿಸಿದ್ದಾರೆ.

ತಾಜ್ ಮಹಲ್ ಚಿತ್ರದಲ್ಲಿ ಎರಡನೇ ನಾಯಕನಾಗಿ ನಟಿಸಿದ್ದ ಅಶೋಕ್ ಕುಮಾರ್ ಹಾಗೂ 'ಜಿಂಕೆ ಮರಿ' ಖ್ಯಾತಿಯ ಶ್ವೇತಾ ಚಿತ್ರದ ನಾಯಕ ನಾಯಕಿ. ಕಣಗಾಲರಚಿತ್ರಕ್ಕೂ ಹೊಸ ಮಾನಸ ಸರೋ ವರಕ್ಕೂ ಸಾಮ್ಯತೆ ಇಲ್ಲ! ಬರೀ ಶೀರ್ಷಿಕೆಯಲ್ಲಷ್ಟೇ ಸಾಮ್ಯತೆ ಇದೆ ಎಂದುಕೊಳ್ಳುವಂತೂ ಇಲ್ಲ. ಏಕೆಂದರೆ ಮೂಲಚಿತ್ರದಲ್ಲಿ ನಟಿಸಿದ್ದ ಪದ್ಮವಾಸಂತಿ ತಾಯಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಳ್ಳಾರಿಯ ಸಂಡೂರಿನಲ್ಲಿ ಚಿತ್ರಕತೆ ನಡೆಯುವುದು ಮತ್ತೊಂದು ವಿಶೇಷ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಜಯಮಾಲಾ ರಾಜೀನಾಮೆಗೆ ಹರೀಶ್ ಆಗ್ರಹ
ಸನ್ ನೆಟ್ ವರ್ಕ್ ನಿಂದ ಮತ್ತೊಂದು ಕನ್ನಡಟಿವಿ
ಯುಗಾದಿಗೆ ಕನ್ನಡದ ಕಿರಣ್ ಬೇಡಿಯ ರಸದೌತಣ
ಲೋಕಸಭೆ ಚುನಾವಣೆಗೆ ತಾರೆಗಳ ಕಸರತ್ತು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada