»   » ಅಣ್ಣಾವ್ರ ಗೆಟಪ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ

ಅಣ್ಣಾವ್ರ ಗೆಟಪ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ

Posted By:
Subscribe to Filmibeat Kannada

ವರನಟ ಡಾ.ರಾಜ್ ಕುಮಾರ್ ಅಭಿನಯದ ಹೊಸಬೆಳಕು, ಚಲಿಸುವ ಮೋಡಗಳು, ಶ್ರೀನಿವಾಸ ಕಲ್ಯಾಣ, ವೀರ ಕೇಸರಿ, ಆಪರೇಷನ್ ಡೈಮಂಡ್ ರಾಕೆಟ್, ಭಕ್ತಕುಂಬಾರ, ಒಂದು ಮುತ್ತಿನ ಕತೆ, ಚಿತ್ರಗಳ ಗೆಟಪ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಣಿಸಲಿದ್ದಾರೆ. 'ಚೆಲುವೆಯೇ ನಿನ್ನೇ ನೋಡಲು' ಚಿತ್ರಕ್ಕಾಗಿ ಶಿವರಾಜ್ ಕುಮಾರ್ ಈ ವಿಭಿನ್ನ ಅವತಾರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.

ರಾಜ್ ಅಭಿನಯದ 'ಆಕಸ್ಮಿಕ' ಚಿತ್ರದ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು...' ಹಾಡನ್ನು ರೀಮಿಕ್ಸ್ ನಲ್ಲಿ ವಿಶೇಷವಾಗಿ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಸಂಯೋಜನೆ ಮಾಡಿದ್ದಾರೆ. ಚೆಲುವೆಯೇ...ಚಿತ್ರದಲ್ಲಿ ಶಿವಣ್ಣನ ಜೊತೆ ರಾಜ್ ಸಹ ಕಾಣಿಸಲಿದ್ದಾರೆ. ಎರಡು ಪ್ರೇಮ್ ಗಳಲ್ಲಿ ರಾಜ್ ಅಭಿನಯದ ಚಿತ್ರಗಳ ತುಣುಕುಗಳೊಂದಿಗೆ ಅದೇ ಗೆಟಪ್ ನಲ್ಲಿ ಶಿವಣ್ಣ ಸಹ ಕಾಣಿಸಲಿದ್ದಾರೆ.

ಒಟ್ಟಾರೆಯಾಗಿ ಚೆಲುವೆಯೇ... ಚಿತ್ರದಲ್ಲಿ ಅಪ್ಪ, ಮಗನ ಜುಗಲ್ ಬಂಧಿಯನ್ನು ನೋಡುವ ಸೌಭಾಗ್ಯ ಪ್ರೇಕ್ಷಕರಿಗೆ ಸಿಗಲಿದೆ. 'ಭಕ್ತಪ್ರಹ್ಲಾದ' ಚಿತ್ರದ ಹಿರಣ್ಯಕಶಿಪು ಗೆಟಪ್ ನಲ್ಲೂ ಶಿವಣ್ಣ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. ಈ ಭಾಗದ ಚಿತ್ರೀಕರಣ ಶಿವರಾಜ್ ಕುಮಾರ್ ಅವರ ನಾಗಾವರದಲ್ಲಿರುವ ಮನೆಯಲ್ಲಿ ನಡೆದಿರುವುದು ವಿಶೇಷ.

ಶಿವರಾಜ್ ಕುಮಾರ್ ಅವರ 100ನೇ ಚಿತ್ರ 'ಜೋಗಯ್ಯ' ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ 99ನೇ ಹಾಗೂ 98ನೇ ಚಿತ್ರ ಯಾವುದು ಎಂಬ ಪ್ರಶ್ನೆಗೆ ಸ್ವತಃ ಶಿವರಾಜ್ ಕುಮಾರ್ ಅವರು ಉತ್ತರ ನೀಡಿದ್ದಾರೆ. ಶಿವಣ್ಣ್ಣನ 99ನೇ ಚಿತ್ರ 'ಶಿವಪುಟ್ಟಸ್ವಾಮಿ ಫ್ರಮ್ ಸಿಂಗಾನಲ್ಲೂರು' ಮತ್ತು 98ನೇ ಚಿತ್ರ 'ಮೈಲಾರಿ' ಎಂದು ತಿಳಿಸಿದ್ದಾರೆ. ಶಿವಣ್ಣನ101ನೇ ಚಿತ್ರ 'ಪುಣ್ಯವಂತ'.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada