»   »  ನೂತನ ಚಿತ್ರದ ಹಾಡಿನಲ್ಲಿ ಸುಮನ್ ರಂಗನಾಥ್

ನೂತನ ಚಿತ್ರದ ಹಾಡಿನಲ್ಲಿ ಸುಮನ್ ರಂಗನಾಥ್

Subscribe to Filmibeat Kannada
Suman Ranganath
ಫ್ರೆಂಡ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ನೂತನಚಿತ್ರಕ್ಕೆ ಈಗ ಹಾಡುಗಳು ಚಿತ್ರೀಕೃತವಾಗುತ್ತಿರುವ ಕಾಲ. ಕನ್ನಡದಲ್ಲಿ ಬೇಡಿಕೆಯ ನಟಿಯಾಗಿರುವ, ಮಿಂಚಿ ಹೋಗುವ ಪಾತ್ರಗಳಲ್ಲಿ ಬಂದು ಮರೆಯಾಗುವ ಬೆಡಗಿ ಸುಮನ್ ರಂಗನಾಥ್ ಮತ್ತು ನಾಯಕರಲ್ಲೊಬ್ಬರಾದ ರೋಹನ್ ಗೌಡ ಅವರ ಅಭಿನಯದಲ್ಲಿ, ಸಾಹಿತಿ ವಿ.ಮನೋಹರ್ ಬರೆದಿರುವ 'ನಿಂದಲ್ಲ ಕಾಲ ನಂದೂ ಬಾ ಹ ಬೀಬಿ - ಪ್ಯಾರಿ ಲೈಲಾ ಹಿಂದೆ ಬಾ ಹ ಬೀಬಿ' ಎಂಬ ಗೀತೆ ಬೆಂಗಳೂರಿನ ಎನ್.ವೈ.ಕೆ ಡಿಸ್ಕೋಟೆಕ್‌ನಲ್ಲಿ ಚಿತ್ರೀಕೃತವಾಯಿತು. ಚಿನ್ನಿಪ್ರಕಾಶ್ ಈ ಗೀತೆಗೆ ನೃತ್ಯ ಸಂಯೋಜಿಸಿದ್ದಾರೆ.

ಇದೇ ಚಿತ್ರದ ಮತ್ತೊಂದು ಗೀತೆ 'ಸಲಾಂ ಸಲಾಂ ನಮಸ್ಥೆ ಪ್ರೀತಿ ಮಾಡೋರಿಗೆ - ಸಲಾಂ ಸಲಾಂ ನಮಸ್ಥೆ ದೋಸ್ತಿ ಅನ್ನೋರಿಗೆ - ಸಲಾಂ ಸಲಾಂ ನಮಸ್ಥೆ ಈ ಪ್ರೀತಿ ದೋಸ್ತಿಗೆ ಎಂಬ ಗೀತೆ ಬಿಡದಿ ಬಳಿಯ ಬಿ.ಜಿ.ಎಸ್ ಕಾಲೇಜಿನಲ್ಲಿ ಚಿತ್ರೀಕೃತವಾಯಿತು. ಚೇತನ್ ರಚಿಸಿರುವ ಈ ಗೀತೆಯ ಚಿತ್ರೀಕರಣದಲ್ಲಿ ಮಿಥುನ್ ತೇಜಸ್ವಿ, ವಿಶಾಖ ಸಿಂಗ್ ಹಾಗೂ ರೋಹನ್ ಗೌಡ ಪಾಲ್ಗೊಂಡಿದ್ದರು. ಆನಂದ್ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ.

ನಿರ್ದೇಶಕ ಬಿ.ಶಂಕರ್ ಅವರು ಚಿತ್ರಕತೆ ಬರೆದು ನಿರ್ಮಾಣದ ಹೊಣೆ ಹೊತ್ತಿರುವ ಈ ನೂತನ ಚಿತ್ರಕ್ಕೆ ಸುಂದರನಾಥ್ ಸುವರ್ಣರ ಛಾಯಾಗ್ರಹಣವಿದೆ, ಗಿರಿಧರ ದಿವಾನ್ ಸಂಗೀತ, ವಿ.ಮನೋಹರ್, ಚೇತನ್, ಆರ್ಯ ಗೀತರಚನೆ, ಶ್ರೀ ಸಂಕಲನ, ಮಂಜುನಾಥ್ ಸಂಭಾಷಣೆ, ಹೊಸ್ಮನೆ ಮೂರ್ತಿ ಕಲೆ, ಚಿನ್ನಿಪ್ರಕಾಶ್ ನೃತ್ಯ, ರಾಮಣ್ಣನವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಮಿಥುನ್ ತೇಜಸ್ವಿ, ವಿಶಾಖ ಸಿಂಗ್(ಬಾಂಬೆ), ರೋಹನ್ ಗೌಡ, ಸುಮನ್ ರಂಗನಾಥ್, ಉಮಾಶ್ರೀ, ಹರೀಶ್ ರಾಯ್, ಮೈಕಲ್ ಮಧು, ರೇಖಾದಾಸ್ ಮುಂತಾದವರ ತಾರಾಬಳಗ ಈ ನೂತನ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸುಮನ್ ಮತ್ತೆ ಕುಣಿಯಲಿದ್ದಾರೆ ಅಂಜದಿರಿ!!
ಬಿಂದಾಸ್'ಐಟಂ ಸಾಂಗಿಗಾಗಿ ಮತ್ತೆ ಬಂದಳು ಸುಮನ್!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada