For Quick Alerts
  ALLOW NOTIFICATIONS  
  For Daily Alerts

  ಮೈಸೂರಲ್ಲಿ ಪುನೀತ್ ಅಭಿಮಾನಿಗಳಿಗೆ ಲಾಠಿ ರುಚಿ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಮೈಸೂರಿನಲ್ಲಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಹೊಟೇಲೊಂದರ ಉದ್ಘಾಟನೆಗೆ ಬಂದಿದ್ದ ಪುನೀತ್‌ರನ್ನು ನೋಡಲು ಅವರ ಅಭಿಮಾನಿಗಳು ಮುಗಿಬಿದ್ದ ಕಾರಣ ಪೊಲೀಸರು ಅವರನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಬೇಕಾಯಿತು.

  ಹೊಟೇಲ್ ಉದ್ಘಾಟನೆಗೆ ಪುನೀತ್ ಬರುತ್ತಾರೆ ಎಂದು ಮುಂಚಿತವಾಗಿಯೇ ತಿಳಿದ ಕಾರಣ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪುನೀತ್ ಆಗಮಿಸುತ್ತಿದ್ದಂತೆ ಅವರ ಕಾರಿಗೆ ಅಭಿಮಾನಿಗಳು ಮುತ್ತಿಗೆ ಹಾಕಿದರು. ಇದರಿಂದ ಪುನೀತ್ ಕಾರಿನಿಂದ ಕೆಳಗಿಳಿಯಲು ಹರಸಾಹಸ ಪಡಬೇಕಾಯಿತು.

  ಪೊಲೀಸರ ಸಹಾಯ ಪಡೆದು ಪುನೀತ್ ಕಾರಿನಿಂದ ಕೆಳಗಿಳಿದರಾದರೂ ಅಭಿಮಾನಿಗಳ ನೂಕು ನುಗ್ಗಲನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕಡೆಗೆ ಪೊಲೀಸರು ತಮ್ಮ ಲಾಠಿಗಳಿಗೆ ಬುದ್ಧಿ ಹೇಳಬೇಕಾಯಿತು. ಪುನೀತ್ ಹೊಟೇಲನ್ನು ತರಾತುರಿಯಲ್ಲಿ ಉದ್ಘಾಟಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ. (ಏಜೆನ್ಸೀಸ್)

  English summary
  Police made a lathicharge to disperse fans of the Powere Star Puneeth Rajkumar in Mysore. The actor came for inaugurate a private hotel at Bangalore road. But the crow was uncontrollable and police has used lathi charge.actor puneeth rajkumar, fans lathicharged, mysore police, puneeth fans lathicharged, ನಟ ಪುನೀತ್ ರಾಜ್ ಕುಮಾರ್, ಅಭಿಮಾನಿಗಳಿಗೆ ಲಾಠಿ ರುಚಿ, ಮೈಸೂರು ಪೊಲೀಸ್, ಪುನೀತ್ ಅಭಿಮಾನಿಗಳಿಗೆ ಲಾಠಿ ಏಟು

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X