For Quick Alerts
  ALLOW NOTIFICATIONS  
  For Daily Alerts

  ಡ್ಯಾನ್ಸ್ ಮಾಸ್ಟರ್ ಹರ್ಷ ಆಕ್ಷನ್ ಕಟ್‌ನಲ್ಲಿ ಸುದೀಪ್

  By Rajendra
  |

  ಕನ್ನಡ ಚಿತ್ರಗಳ ಡ್ಯಾನ್ಸ್ ಮಾಸ್ಟರ್ ಹರ್ಷ ಈಗಾಗಲೆ ಚಿತ್ರ ನಿರ್ದೇಶಕರಾಗಿ ಬದಲಾಗಿರುವುದು ಗೊತ್ತೇ ಇದೆ. ಈಗಾಗಲೆ ಮೂರು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಅವರು ಈಗ ಗಾಡ್ ಫಾದರ್ ಎಂದೇ ನಂಬಿರುವ ಕಿಚ್ಚ ಸುದೀಪ್ಗೆ ಮೊಟ್ಟ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ.

  ಎನ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರ ಮಹಾಶಿವರಾತ್ರಿ ದಿನ ಸೆಟ್ಟೇರುವ ಸಾಧ್ಯತೆಗಳಿವೆ. ಅಥವಾ ಮಾರ್ಚ್ ಮೊದಲ ವಾರದಲ್ಲೇ ಸೆಟ್ಟೇರಬಹುದು. ಒಟ್ಟಿನಲ್ಲಿ ಸುದೀಪ್‌ಗೆ ಹರ್ಷ ಆಕ್ಷನ್ ಕಟ್ ಹೇಳುವುದು ಗ್ಯಾರಂಟಿಯಾಗಿದೆ. ಬಿರುಗಾಳಿ, ಗೆಳೆಯ ಹಾಗೂ ಚಿಂಗಾರಿ ಇವು ಹರ್ಷ ನಿರ್ದೇಶನದ ಚಿತ್ರಗಳು.

  ವಿಶೇಷ ಎಂದರೆ ಈ ಚಿತ್ರಕ್ಕೆ ಕತೆ ಚಿತ್ರಕತೆಯನ್ನು ತಮಿಳು ಮೂಲದವರೊಬ್ಬರು ಹೆಣೆಯುತ್ತಿದ್ದಾರೆ. ಈ ಚಿತ್ರದ ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಏತನಧ್ಯೆ ಹರ್ಷ ನಿರ್ದೇಶನದ 'ಚಿಂಗಾರಿ' ಚಿತ್ರ ಫೆಬ್ರವರಿ 3ರಂದು ಬಿಡುಗಡೆಗೆ ಸಿದ್ಧವಾಗಿದೆ. (ಏಜೆನ್ಸೀಸ್)

  English summary
  Kannada films dance master turned director Harsha will be directing Sudeep for first time. N.Kumar is the producer of the movie. The film is yet to be titled to be launched on the Mahashivarathri day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X