»   »  ಸೈನೈಡ್ ಖ್ಯಾತಿಯ ರಮೇಶ್ ರ ಪೊಲೀಸ್ ಕ್ವಾರ್ಟರ್ಸ್

ಸೈನೈಡ್ ಖ್ಯಾತಿಯ ರಮೇಶ್ ರ ಪೊಲೀಸ್ ಕ್ವಾರ್ಟರ್ಸ್

Posted By:
Subscribe to Filmibeat Kannada
A M R Ramesh back with Police Quaters
ಪ್ರಬಲ ಕಥಾಹಂದರವನ್ನು ಹೊಂದಿದ್ದ 'ಸೈನೈಡ್' ನಂತಹ ಅತ್ಯುತ್ತಮಚಿತ್ರನಿರ್ದೇಶಿಸಿದ್ದ ಎ ಎಂ ಆರ್ ರಮೇಶ್ ನೆನಪಿರಬೇಕಲ್ಲ?ಸೈನೈಡ್ ಚಿತ್ರ 'ಕುಪ್ಪಿ' ಹೆಸರಿನಲ್ಲಿ ತಮಿಳು ಭಾಷೆಗೂ ರೀಮೇಕ್ ಆಗಿತ್ತು. ರಮೇಶ್ ಈಗ ಸತ್ಯ ಘಟನೆಯಾಧಾರಿತ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ಎರಡು ಭಾಷೆಗಳಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ 'ಪೊಲೀಸ್ ಕ್ವಾರ್ಟರ್ಸ್' ಎಂದು ಹೆಸರಿಡಲಾಗಿದೆ. 1982ರಲ್ಲಿ ನಡೆದ ಆಕ್ಷನ್, ಸೆಂಟಿಮೆಂಟ್ ಗಳನ್ನು ಒಳಗೊಂಡ ಅಪ್ಪಟ ಪ್ರೇಮಕತೆಯೇ ಈ ಚಿತ್ರಕ್ಕೆ ಸ್ಪೂರ್ತಿಯಂತೆ. ಹೊಸಬರಾದ ಅನೀಸ್ ತೇಜಸ್ವರ್ ಮತ್ತು ಸೋನು ಚಿತ್ರದ ಪ್ರಧಾನ ಪಾತ್ರಧಾರಿಗಳು. ತಮಿಳಿನಲ್ಲಿ ಈ ಚಿತ್ರಕ್ಕೆ 'ಕವಲಾರ್ ಕುಡಿಯಿರಿಪ್ಪು' ಎಂದು ಹೆಸರಿಟ್ಟಿದ್ದಾರೆ.

ಜೇಮ್ಸ್ ವಸಂತನ್ ಸಂಗೀತ ಸಂಯೋಜನೆ, ದ್ವಾರಕನಾಥ್ ಛಾಯಾಗ್ರಹಣ ಚಿತ್ರಕ್ಕಿದೆ. ವಸಿಷ್ಠ ಬ್ಯಾನರಿನಡಿ ಈ ಚಿತ್ರವನ್ನು ಅನಿತಾ ಮತ್ತು ಎಸ್ ಇಂದುಮತಿ ನಿರ್ಮಿಸುತ್ತಿದ್ದಾರೆ. ಕತೆ, ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನ ಎ ಎಂ ಆರ್ ರಮೇಶ್. ಮಾರ್ಚ್ 27ರಂದು ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರ ಸೆಟ್ಟೇರಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮಿಸ್‌ ಮಾಡದಿರಿ, ಒಳ್ಳೆ ಚಿತ್ರಕ್ಕೆ 'ಸೈನೈಡ್‌" ಮಾದರಿ(ವಿಮರ್ಶೆ)
ಹಿಂದಿಯ 'ಸೈನೈಡ್‌"ನಲ್ಲಿ ಅಮಿತಾಭ್‌, ನಾನಾ ಗ್ಯಾರಂಟಿ
'ಸೈನೈಡ್‌" ಮುಗೀತು! ಇನ್ಮುಂದೆ ವೀರಪ್ಪನ್‌ಬೇಟೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada