»   »  ಆಪ್ತರಕ್ಷಕದ ಸ್ನೇಹಾ ಸ್ಥಾನಕ್ಕೆ ಭಾವನಾ ಆಗಮನ

ಆಪ್ತರಕ್ಷಕದ ಸ್ನೇಹಾ ಸ್ಥಾನಕ್ಕೆ ಭಾವನಾ ಆಗಮನ

Posted By:
Subscribe to Filmibeat Kannada
Bhavana Replaces Sneha in Apta Rakshaka
ವಿಷ್ಣುವರ್ಧನ್ ರ 'ಆಪ್ತರಕ್ಷಕ' ಚಿತ್ರದಲ್ಲಿ ನಟಿಸುತ್ತಿರುವ ಸ್ನೇಹಾ ಸ್ಥಾನಕ್ಕೆ ಕನಸು ಕಂಗಳ ಚೆಲುವೆ, ಕನ್ನಡದ ನಟಿ ಭಾವನಾರನ್ನು ತರಲಾಗಿದೆ. ಸ್ನೇಹ ಈ ಹಿಂದೆ ರವಿಚಂದ್ರನ್ ರ ರವಿಶಾಸ್ತ್ರಿ ಚಿತ್ರದಲ್ಲಿ ನಟಿಸಿದ್ದರು. ಈಗ ಏಕಾಏಕಿ ಸ್ನೇಹಾರ ಜಾಗಕ್ಕೆ ಭಾವನಾರನ್ನು ಆಯ್ಕೆ ಮಾಡಲಾಗಿದೆ.

ವಿಷ್ಣು ನಟನೆಯ 200ನೇ ಚಿತ್ರ ಇದಾಗಿದ್ದು, ಮನೋರೋಗ ತಜ್ಞನ ಪಾತ್ರವನ್ನು ಅವರು ಪೋಷಿಸುತ್ತಿದ್ದಾರೆ. ವಿನಯಾ ಪ್ರಸಾದ್ ಮತ್ತು ಶ್ರೀನಿವಾಸಮೂರ್ತಿ ಕುಟುಂಬದ ಹಿರಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಲಕ್ಷ್ಮಿ ಗೋಪಾಲಸ್ವಾಮಿ, ಭಾವನಾ ಮತ್ತು ಸಂಧ್ಯಾ ಅವರ ಮಕ್ಕಳ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಆಪ್ತಮಿತ್ರ ಚಿತ್ರದಲ್ಲಿ ಮಂತ್ರವಾದಿಯಾಗಿ ಅಭಿನಯಿಸಿದ್ದ ಅವಿನಾಶ್ ಈ ಚಿತ್ರದಲ್ಲೂ ಅದೇ ಗೆಟಪ್ ನಲ್ಲಿ ಕಾಣಿಸಲಿದ್ದಾರೆ. ಮಾರ್ಚ್ 10ರಂದು ಚಿತ್ರೀಕರಣ ಆರಂಭಿಸಿದ 'ಆಪ್ತರಕ್ಷಕ' ಸದ್ಯ ಪಳನಿಯಲ್ಲಿನ ಪುರಾತನ ಬಂಗಲೆಯಲ್ಲಿ ಬೀಡುಬಿಟ್ಟಿದೆ. ವಿಷ್ಣು ಮತ್ತು ಸಂಧ್ಯಾ ನಡುವಿನ ಸನ್ನಿವೇಶಗಳ ಚಿತ್ರೀಕರಣ ಮುಗಿದಿದೆ ಎಂದು ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಅಂದು ಆಪ್ತಮಿತ್ರ ಇಂದು ಆಪ್ತರಕ್ಷಕನಾದ ವಿಷ್ಣು
ತೆಲುಗಿನಲ್ಲಿ ಸಲ್ಲದ ನಿಖಿತಾಗೆ ಕನ್ನಡದಲ್ಲಿ ಅದೃಷ್ಟ
ನಿಲ್ಲದ ಸಿಂಹ ಘರ್ಜನೆ; 3 ರೀಮೇಕ್ ಗಳಲ್ಲಿ ವಿಷ್ಣು
ವಿಷ್ಣುವರ್ಧನ್ ಅವರ 201ನೇ ಚಿತ್ರ ದೊಡ್ಮನುಷ್ಯ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada