»   » ಸೆನ್ಸಾರ್ ನಲ್ಲಿ ರಮೇಶ್ 'ಕ್ರೇಜಿ ಕುಟುಂಬ' ಪಾಸು

ಸೆನ್ಸಾರ್ ನಲ್ಲಿ ರಮೇಶ್ 'ಕ್ರೇಜಿ ಕುಟುಂಬ' ಪಾಸು

Posted By:
Subscribe to Filmibeat Kannada

ರಮೇಶ್ ಅರವಿಂದ ಅಭಿನಯದ 'ಕ್ರೇಜಿ ಕುಟುಂಬ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರದಲ್ಲಿ ಬರುವ ಉತ್ತಮ ಸನ್ನಿವೇಶಗಳನ್ನು ಪ್ರಶಂಸಿಸಿರುವ ಮಂಡಳಿ ಇದೊಂದು ಪರಿಶುದ್ದ ಮನೋರಂಜನಾ ಚಿತ್ರವೆಂದು ಶ್ಲಾಘಿಸಿದೆ ಎಂದು ನಿರ್ಮಾಪಕಿ ಶ್ರೀಮತಿ ಲೀನಾಜೋಶಿ ತಿಳಿಸಿದ್ದಾರೆ.

ಬಿ.ರಾಮಮೂರ್ತಿ ನಿರ್ದೇಶನದ ಈ ಚಿತ್ರ ಮರಾಠಿ ಚಿತ್ರವೊಂದರ ಸ್ಪೂರ್ತಿಯಿಂದ ನಿರ್ಮಾಣವಾಗಿದೆ. ಹಿರಿಯನಟ ಅನಂತನಾಗ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ಅಪಾರ ಮೆಚ್ಚುಗೆ ಸೂಚಿಸಿರುವ ಅವರು ಚಿತ್ರ ಯಶಸ್ಸು ಕಾಣುವುದು ಖಂಡಿತಾ ಎಂದಿದ್ದಾರೆ.

ರಿಕ್ಕಿಕೇಜ್ ಸಂಗೀತ, ಮಲ್ಲಿಕಾರ್ಜುನ್ ಛಾಯಾಗ್ರಹಣ, ನರಹಳ್ಳಿ ಜ್ಞಾನೇಶ್ ಸಂಕಲನ, ಮುರಳಿ-ರಾಮು ನೃತ್ಯ, ಶ್ರೀನಿವಾಸ್ ಕಲೆ, ಪ್ರಸಾದ್ ಸಹ ನಿರ್ದೇಶನ ಹಾಗೂ ಗಂಡಸಿರಾಜು ನಿರ್ಮಾಣ ನಿರ್ವಹಣೆಯಿರುವ 'ಕ್ರೇಜಿ ಕುಟುಂಬ"ದ ತಾರಾಬಳಗದಲ್ಲಿ ರಮೇಶ್, ಅನಂತನಾಗ್, ಸನಾ, ಎಂ.ಎಸ್.ಉಮೇಶ್, ರಜನಿಕಾಂತ್, ವಿನಯ್‌ರಾಂಪ್ರಸಾದ್, ಸೋಮಶೇಖರ್, ಚಿಕ್ಕಮಗಳೂರು ಮಧು, ಬೇಬಿ ನಿತ್ಯಶ್ರೀ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada