»   »  ಡಿ.ಟಿ.ಎಸ್‌ನಲ್ಲಿ ‘ಚಂಕಾಯ್ಸಿ ಚಿಂದಿ ಉಡಾಯ್ಸಿ

ಡಿ.ಟಿ.ಎಸ್‌ನಲ್ಲಿ ‘ಚಂಕಾಯ್ಸಿ ಚಿಂದಿ ಉಡಾಯ್ಸಿ

Subscribe to Filmibeat Kannada
Nidhi Subbiah
ದತ್ತಾತ್ರೇಯ ಮೂವೀಸ್ ಲಾಂಛನದಲ್ಲಿ ಅನಸೂಯ ಹಾಗೂ ಜೀವನ್ ನಿರ್ಮಿಸುತ್ತಿರುವ 'ಚಂಕಾಯ್ಸಿ ಚಿಂದಿ ಉಡಾಯ್ಸಿ' ಚಿತ್ರ ನಗರದ ಮಂಜರಿ ಸ್ಟೂಡಿಯೋದಲ್ಲಿ ಡಿ.ಟಿ.ಎಸ್ ತಂತ್ರಜ್ಞಾನದಿಂದ ಅಲಂಕೃತವಾಗುತ್ತಿದೆ. ನಟ ಕೋಮಲ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಹಾಸ್ಯವೇ ಪ್ರಧಾನವಾಗಿದೆ. ಮನೋರಂಜನೆಯನ್ನು ಹಂಬಲಿಸುವ ಚಿತ್ರರಸಿಕರಿಗೆ ನಮ್ಮ ಚಿತ್ರ ನಗೆಯ ರಸದೌತಣ ನೀಡಲಿದೆ ಎಂದು ಚಿತ್ರದ ನಿರ್ದೇಶಕ ಎ.ಆರ್.ಬಾಬು ತಿಳಿಸಿದ್ದಾರೆ. ಇದು ಅವರ ನಿರ್ದೇಶನದ 25ನೇ ಚಿತ್ರವೂ ಹೌದು.

ಒಂದೇ ಕೋಣೆಯಲ್ಲಿ ವಾಸವಾಗಿದ್ದ ಹುಡುಗರು ಓರಗೆಯ ಚೆಲುವೆಯನ್ನು ಪ್ರೀತಿಸುತ್ತಿರುತ್ತಾರೆ. ಆದರೆ ಆಕೆಯ ಪ್ರೀತಿ ಯಾರ ಮೇಲೆ? ಎಂಬ ಸ್ವಾರಸ್ಯಕರ ಕಥಾ ಹಂದರವನ್ನು ಈ ಚಿತ್ರ ಒಳಗೊಂಡಿದೆ. ಭಾರತ ಸೇರಿದಂತೆ ಮೂರು ದೇಶಗಳಲ್ಲಿ ಚಿತ್ರೀಕರಣಗೊಂಡ ಕನ್ನಡದ ಮೊದಲ ಹಾಸ್ಯ ಚಿತ್ರ ಎಂಬ ಹೆಗ್ಗಳಿಕೆ 'ಚಂಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರಕ್ಕಿದೆ.

ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಬಾಲಾಜಿ ಸಂಗೀತ ಸಂಯೋಜಿಸಿದ್ದಾರೆ. ಪ್ರಕಾಶ್ ಸಂಕಲನ, ಡಿಫ಼ರೆಂಟ್ ಡ್ಯಾನಿ ಸಾಹಸ, ಶ್ರೀಧರ್ ಹಾಗೂ ವಿದ್ಯಾ ನೃತ್ಯ, ಅನಿಲ್ ನಿರ್ಮಾಣ ನಿರ್ವಹಣೆಯಿರುವ ಈ ನೂತನ ಚಿತ್ರದ ತಾರಾಬಳಗದಲ್ಲಿ ಕೋಮಲ್ ಕುಮಾರ್, ರಾಹುಲ್, ಕಿರಣ್, ಗಿರಿ ದಿನೇಶ್, ನೇತಾನಿಯಾ, ನಿಧಿ ಸುಬ್ಬಯ್ಯ, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ಹೊನ್ನವಳ್ಳಿ ಕೃಷ್ಣ, ಪ್ರಮೀಳ ಜೋಷಾಯಿ, ಮಾರಿಮುತ್ತು, ಶ್ರೀನಿವಾಸ ಗೌಡ, ನಂದ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada