»   » ಗುಂಡ್ಲುಪೇಟೆಯಲ್ಲಿ ಚಿತ್ರ ನಿರ್ದೇಶಕ ರತ್ನಜ ವಿವಾಹ!

ಗುಂಡ್ಲುಪೇಟೆಯಲ್ಲಿ ಚಿತ್ರ ನಿರ್ದೇಶಕ ರತ್ನಜ ವಿವಾಹ!

Posted By:
Subscribe to Filmibeat Kannada

ಕನ್ನಡದ ಸದಭಿರುಚಿಯ ಚಿತ್ರ ನಿರ್ದೇಶಕ ರತ್ನಜ ಸದ್ದಿಲ್ಲದಂತೆ ಗುರುವಾರ(ಆ.26) ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಅವರ ವಿವಾಹವು ಗುಂಡ್ಲುಪೇಟೆಯ ಗೋಪಾಲಸ್ವಾಮಿ ಬೆಟ್ಟದಲ್ಲಿ ನೆರವೇರಿತು. ಅಕ್ಕನ ಮಗಳನ್ನು ರತ್ನಜ ವರಿಸಿದ್ದಾರೆ.

ತುಂಬ ಸರಳವಾಗಿ ನಡೆದ ವಿವಾಹ ಮಹೋತ್ಸವಕ್ಕೆ ರತ್ನಜ ಕುಟುಂಬಿಕರು ಹಾಗೂ ಬೆರಳೆಣಿಕೆಯಷ್ಟು ಮಂದಿ ಚಿತ್ರರಂಗದ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇವರ ಮದುವೆ ನಡೆಯಿತು.

ಕೆಲದಿನಗಳ ಹಿಂದೆ ಚಿತ್ರನಟಿ ಅಮೂಲ್ಯ ಜೊತೆಗಿನ ಚುಂಬನ ದೃಶ್ಯಗಳು ಕನ್ನಡ ಚಿತ್ರರಂಗದಲ್ಲಿ ಭಾರಿ ಗುಲ್ಲೆಬ್ಬಿಸಿದ್ದವು. ಅಮೂಲ್ಯ ಮತ್ತು ರತ್ನಜ ಪರಸ್ಪರ ಪ್ರೇಮಿಸಿಕೊಳ್ಳುತ್ತ್ತಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈ ಸುದ್ದಿಯನ್ನು ರತ್ನಜ ಮತ್ತು ಅಮೂಲ್ಯ ಇಬ್ಬರೂ ನಿರಾಕರಿಸಿದ್ದರು.

ಅಕ್ಕನ ಮಗಳನ್ನು ಮದುವೆಯಾಗುವ ಮೂಲಕ ರತ್ನಜ ಮತ್ತು ಅಮೂಲ್ಯ ನಡುವಿನ ಗುಸುಗುಸು ಸುದ್ದಿಗಳಿಗೆ ಬ್ರೇಕ್ ಬಿದ್ದಿದೆ. ನೆನಪಿರಲಿ, ಹೊಂಗನಸು, ಪ್ರೇಮಿಸಂ ನಂತಹ ಸದಭಿರುಚಿಯ ಚಿತ್ರಗಳನ್ನು ಕೊಟ್ಟಂತಹ ನಿರ್ದೇಶಕ ರತ್ನಜ. ಅವರ ದಾಂಪತ್ಯ ಜೀವನ ಚಿರಕಾಲ ಇರಲಿ ಎಂದು ಹಾರೈಸೋಣ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada