»   » ತಮಿಳು ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್?

ತಮಿಳು ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್?

Posted By:
Subscribe to Filmibeat Kannada

ಈಗಾಗಲೇ ಹಲವು ಭಾಷೆಗಳಿಗೆ ರೀಮೇಕ್ ಆಗಿರುವ ದಾಖಲೆ ಚಿತ್ರ 'ಮುಂಗಾರು ಮಳೆ' ಇದೀಗ ತಮಿಳು ಚಿತ್ರರಂಗದತ್ತ ಪಯಣ ಬೆಳೆಸಿದೆ. 'ಮುಂಗಾರು ಮಳೆ' ತಮಿಳು ರೀಮೇಕ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕ ನಟನಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

'ಮುಂಗಾರು ಮಳೆ' ಚಿತ್ರ ತೆಲುಗು ಮತ್ತು ಬಂಗಾಳಿ ಭಾಷೆಗಳಿಗೆ ಕ್ರಮವಾಗಿ 'ವಾನ' ಮತ್ತು 'ಪ್ರೇಮರ್ ಕಹಿನಿ' ಎಂದು ರೀಮೇಕ್ ಆಗಿದೆ. ಮುಂಗಾರು ಮಳೆ ತೆರೆಕಂಡು ಅದಾಗಲೇ ನಾಲ್ಕು ವರ್ಷಗಳೇ ಉರುಳಿ ಹೋಗಿವೆ. ಈಗ ತಮಿಳಿನಲ್ಲಿ ರೀಮೇಕ್ ಆಗುತ್ತಿರುವುದು ಗಾಳಿಸುದ್ದಿಯೋ ಅಥವಾ ನಿಜವಾದ ಸುದ್ದಿಯೋ ಎಂಬ ಗುಮಾನಿ ಕಾಡುತ್ತಿದೆ. ಆದರೂ ಗಣೇಶ್ ತಮಿಳಿಗೆ ಪದಾರ್ಪಣೆ ಮಾಡಿದ್ದು ಸರಿಯೇ? ಎಂಬ ಪ್ರಶ್ನೆ ಕಾಡುತ್ತದೆ.

ತಮಿಳಿನಲ್ಲಿ ಗಣೇಶ್ ಜೊತೆ ಯಾರ‌್ಯಾರು ನಟಿಸಲಿದ್ದಾರೆ, ನಿರ್ದೇಶಕ, ತಂತ್ರಜ್ಞರು ಯಾರು? ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಏತನ್ಮಧ್ಯೆ ಗಣೇಶ್ ಹಿಂದಿಯಲ್ಲಿ ದಾಖಲೆ ನಿರ್ಮಿಸಿದ್ದ 'ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರವನ್ನು ಕನ್ನಡಕ್ಕೆ ತರಲು ಸಿದ್ಧತೆ ನಡಿಸಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆಯಂತೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada