»   » ಹೂವಿನ ಕಡೆಗೆ ರವಿ ಹೊರಳುವ ಸಮಯ

ಹೂವಿನ ಕಡೆಗೆ ರವಿ ಹೊರಳುವ ಸಮಯ

Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಹೂ' ಚಿತ್ರ 2010ರ ಫೆಬ್ರವರಿಯಲ್ಲಿ ಅರಳಲು ಅಣಿಯಾಗಿದೆ. ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಹೂವಿಗೆ ಅಂತಿಮ ಸ್ಪರ್ಶ ಕೊಡುವಲ್ಲಿ ಕ್ರೇಜಿಸ್ಟಾರ್ ತಲ್ಲೀನರಾಗಿದ್ದಾರೆ. ಸ್ನೇಹ ಮತ್ತು ಪ್ರೀತಿಯ ಸಂಕೇತ ಈ ಹೂ ಚಿತ್ರ. ರವಿಚಂದ್ರನ್ ರ ಪ್ರೇಯಸಿಯಾಗಿ ನಮಿತಾ ಹಾಗೂ ಗೆಳತಿಯಾಗಿ ಮೀರಾ ಜಾಸ್ಮಿನ್ ಕಾಣಿಸಲಿದ್ದಾರೆ.

ಐದು ಹಾಡುಗಳನ್ನು ಒಳಗೊಂಡಿರುವ ಹೂ ಚಿತ್ರವನ್ನು 72 ದಿನಗಳ ಕಾಲ ಚಿತ್ರೀಕರಿಲಾಗಿದೆ. ಚಿತ್ರದ ನಿರೂಪಣೆ ರಂಜನೀಯವಾಗಿರುತ್ತದೆ. ತೆಲುಗಿನ 'ವಸಂತಂ' ಚಿತ್ರವನ್ನು ಯಥಾವತ್ತಾಗಿ ಕನ್ನಡಕ್ಕೆ ತಂದಿಲ್ಲ ಎನ್ನುತ್ತಾರೆ ರವಿಚಂದ್ರನ್. ತಮ್ಮ ಚಿತ್ರ ಹೂವಿನಷ್ಟೇ ಪರಿಮಳ ಹೊಂದಿದೆ ಎಂಬ ಪ್ರಮಾಣಪತ್ರವನ್ನು ರವಿ ನೀಡಿದ್ದಾರೆ.

ನಾಯಕನಾಗಿ ನಟಿಸುತ್ತಿರುವ ರವಿಚಂದ್ರನ್ ಅವರು ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ಜಿ.ಎಸ್.ವಿ.ಸೀತಾರಾಂ ಅವರ ಛಾಯಾಗ್ರಹಣವಿರುವ 'ಹೂಚಿತ್ರದಲ್ಲಿ ಐದು ಹಾಡುಗಳು ಅಡಕವಾಗಿದೆ. ಈ ಗೀತೆಗಳಿಗೆ ವಿ.ಹರಿಕೃಷ್ಣರ ಸಂಗೀತವಿದೆ. ರಂಗಾಯಣ ರಘು, ಸಾಧುಕೋಕಿಲಾ, ಬುಲೆಟ್ ಪ್ರಕಾಶ್ ಹಾಗೂ ಶರಣ್ ಅವರಂತಹ ಅನುಭವಿ ಕಲಾವಿದರು ಈ ಚಿತ್ರದಲಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada