twitter
    For Quick Alerts
    ALLOW NOTIFICATIONS  
    For Daily Alerts

    ಟೈಮ್ಸ್ ಅಭಿಯಾನದಲ್ಲಿ ಕನ್ನಡಿಗರ ಕಿರುಚಿತ್ರ

    By * ಅಮರನಾಥ್.ವಿ.ಬ್ಯಾಡಗಿ, ಹರಪನಹಳ್ಳಿ
    |

    DemoN Cracy short movie poster
    "ಹಲೋ.....ಏನ್ ಮಾಡ್ತಾ ಇದ್ದೀಯಾ, ಎಲ್ಲಿದ್ದೀಯಾ?"

    "ಇಲ್ಲೇ ಸ್ವಲ್ಪ ಕೆಲ್ಸ ಇತ್ತು ....ಸರ್ಕಾರಿ ಕಛೇರಿಗೆ ಬಂದಿದ್ದೆ"
    "ಹೋ ಹೌದಾ! ಸರಿ ಸರಿ, ನಾಳೆ ಆಫೀಸ್ಗೆ ಬರ್ತಿಯಾ ತಾನೆ?"
    "ಇಲ್ಲ ಅನ್ಸುತ್ತೆ"
    "ಯಾಕೆ?"
    "ನಿಂಗೆ ಗೊತ್ತಲ್ಲ, ಸರ್ಕಾರಿ ಕೆಲಸ ಅಂದ್ರೆ ಎಲ್ಲಿ ಸಲೀಸಾಗಿ ಆಗುತ್ತೆ, ಎಲ್ಲಾ ಕಡೆ ಟೇಬಲ್ ಕೆಳಗೆ ತಳ್ಳಬೇಕು, ಎಲ್ಲೆಲ್ಲಿ ತಳ್ಳಬೇಕು, ಎಷ್ಟು ತಳ್ಳಬೇಕು ಅಂತ ವಿಚಾರಿಸಬೇಕು, ದೊಡ್ಡ ತಲೆ ನೋವು ಮಾರಾಯ"

    "ಸರಿ...ಸರಿ ಇನ್ನೇನು ಮಾಡೋಕೆ ಆಗುತ್ತೆ...ಸ್ವಲ್ಪ ಚೌಕಾಸಿ ಮಾಡು" ಅಂತ ಹೇಳಿಟ್ಟೆ. ಕೋಡ್ಬೇಡ ಅಂತ ಹೇಳ್ಬೇಕನಿಸಿದರೂ ಕೊಡಲಿಲ್ಲ ಅಂದ್ರೆ ಅವನ ಕೆಲಸ ಆಗ್ಬೇಕಲ್ಲ ಅಂತ ಸುಮ್ಮನಾದೆ.

    "ಛೇ! ಹೇಗಾಗಿ ಬಿಟ್ಟಿದೆಯಲ್ಲ ಈಗಿನ ಪರಿಸ್ಥಿತಿ" ಅಂತ ಮನಸ್ಸಿನಲ್ಲಿ ಬೇಡ ಅಂದ್ರೂ ಬೇಸರ ನುಸುಳಿಕೊಂಡು ಬಂತು.ಇದು ಕಾರ್ಯಾಂಗದ ನಿಯತ್ತಾದರೆ, ನ್ಯಾಯ ದೊರಕಿಸಿಕೊಡಬೇಕಾದ ನ್ಯಾಯಾಂಗ ಸಹ, ನೋಟಿಗೆ ತಲೆಬಾಗಿದೆ. ದುಡ್ಡಿದ್ದೋನ ಪರ ತೀರ್ಪು ಸಾಮಾನ್ಯವಾಗಿದೆ. ಜೊತೆಗೆ ಈ ಮಾಧ್ಯಮಗಳು, ಇಲ್ಲದ್ದನ್ನು ಇದೆ ಅಂತ ಕಲ್ಪಿಸಿ, ಬೇರೆಯವರಿಗಿಂತ ಹೇಗೆ ಚಿತ್ತಾರವಾಗಿ ಬಿತ್ತರಿಸಲು ಸಾಧ್ಯವೆಂದು ಯೋಚಿಸಿ ಬಿತ್ತರಿಸುವುದರಲ್ಲಿಯೆ ಕಾಲ ಕಳೆಯುತ್ತವೆ. ಇನ್ನು ಶಾಸಕಾ೦ಗದ ಬಗ್ಗೆ ಏನೂ ಹೇಳೋದು ಅಗತ್ಯವಿಲ್ಲವೆಂದು ಕೊಂಡಿದ್ದೇನೆ, ನಿಮಗೆಲ್ಲಾ ತಿಳಿದಿದೆ.

    ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮತ್ತು ಮಾಧ್ಯಮ ರoಗಗಳು ದುಡ್ಡಿಗೋಸ್ಕರ ಅವರವರ ಸ್ವಾರ್ಥಕ್ಕೋಸ್ಕರ ದೇಶವನ್ನೇ ಕಿತ್ತು ತಿನ್ನುತ್ತಾ ಇದ್ದಾರೆ. ಏನೂ ಅರಿಯದ ಮುಗ್ಧ ಸಾಮಾನ್ಯ ಪ್ರತಿದಿನ ಬಲಿಯಾಗ್ತಾ ಇದ್ದಾನೆ. ಭಾರತ ಹಳ್ಳಿಗಳ ದೇಶ ಅನ್ನೋದು ನಿಜ, ಆದರೆ ಈ ಆಧಾರ ಸ್ತಂಭಗಳು, ಈ ಹಳ್ಳಿಗಳ ಉದ್ಧಾರಕ್ಕಾಗಿ ಶ್ರಮಿಸದೆ, ತಮಗೆ ಸಿಗೋ ಉದ್ದನೆ ಹಾರಕ್ಕಾಗಿ ಹರಿದರಿದು ಹಾರಿ ಹಾರಿ ಹಳ್ಳಿಗಳನ್ನೇ ತಿಂದು ತೇಗ್ತಾ ಇದ್ದಾರೆ. ಭ್ರಷ್ಟಾಚಾರಕ್ಕೆ ತನ್ನದೇಯಾದ ಅಸ್ತಿತ್ವವಿಲ್ಲ, ಇವರುಗಳ ಮೂಲಕ ತನ್ನ ಅಸ್ತಿತ್ವ ಪಡೆದುಕೊಂಡು ಆಕಾಶದಗಲ ಹರಡಿರುವ ಇದರ ಆದಿ-ಅಂತ್ಯದ ಕುರುಹು ಸಹ ಯಾರಿಗೂ ಸಿಗುತ್ತಿಲ್ಲ.

    ಪೆಡಂಭೂತವಾಗಿ ಕಾಡುತ್ತಿರುವ ಇವರು ಮಣ್ಣಿನ ಮಕ್ಕಳ ಪರಿಶ್ರಮದ ಫಲವನ್ನು ಅನುಭವಿಸುತ್ತಾ ಇರೋದು, ಎಷ್ಟರಮಟ್ಟಿಗೆ ಸಮಂಜಸ? ಅಂತ್ಯಕ್ಕಿಂತ ಮೊದಲು ಮಾಡಿದ ಯಾವುದೇ ಪ್ರಯತ್ನವೂ ವ್ಯರ್ಥವಲ್ಲ, ಕೀಳಲ್ಲ! ಇನ್ನಾದರೂ ನಾವು ದನಿಗೂಡಿಸಿ, ಈ ವ್ಯವಸ್ಥೆಯ ವಿರುದ್ಧ ನಮ್ಮ ದನಿಯೆತ್ತ ಬೇಕಾಗಿದೆ.

    ಇಂಥಾ ಒಂದು ಪ್ರಯತ್ನವೆ, ಈ "ಡೆಮಾನ್-ಕ್ರಸಿ". ಇದರೆಡೆಗೆ ನಮ್ಮ ಬೈಟೂ ಕಾಫೀ ಬಳಗದಿಂದ ಒಂದು ಕಿರು ಪ್ರಯತ್ನ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯವರು ಪ್ರಾರಂಭ ಮಾಡಿರುವ "ಭಾರತದ ಜೀವನದಲ್ಲಿ ಒಂದು ದಿನ"ದ ಶೀರ್ಷಿಕೆಯ ಅಡಿಯಲ್ಲಿ ಈ ದೃಶ್ಯಾವಳಿಯನ್ನು ಹಾಕಲಾಗಿದೆ.

    ಚೆನ್ನಾಗಿದೆ ಎಂದು ಅನ್ನಿಸಿದವರು ದಯವಿಟ್ಟು ವೋಟ್ ಮಾಡಿ, ಈ ಕೂಗು ಇನ್ನೂ ಹೆಚ್ಚು ಜನರಿಗೆ ತಲುಪುವಂತಾಗಲಿ. ವೀಕ್ಷಿಸಿ ವೋಟ್ ಮಾಡಲು ಈ ಕೊಂಡಿಗೆ ಭೇಟಿಕೊಡಿ, ವೋಟ್ ಮಾಡಿ ನಮ್ಮ ಪ್ರಯತ್ನದ ಜೊತೆಗೆ ನಿಮ್ಮ ಪ್ರಯತ್ನದ ಪರಿಚಯ ಪ್ರಪಂಚಕ್ಕೆ ಆಗುವಂತಾಗಲಿ...

    English summary
    A Kannada Short Film 'Demon Cracy' is selected in 'A day in life' campaign started by Times Group. DemoN cracy is short movie which highlights the pathetic state of four pillars of Indian democracy namely Legislative, Executive, Judiciary and the Press(Media).
    Monday, February 28, 2011, 10:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X