»   »  ಜುಲೈನಲ್ಲಿ 'ಕೆಂಚ' ಯುವ ಹೃದಯಗಳಿಗೆ ಲಗ್ಗೆ

ಜುಲೈನಲ್ಲಿ 'ಕೆಂಚ' ಯುವ ಹೃದಯಗಳಿಗೆ ಲಗ್ಗೆ

Subscribe to Filmibeat Kannada

ರಮೇಶ್ ಯಾದವ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಕೆಂಚ' ಚಿತ್ರ ಜುಲೈ ಮೊದಲವಾರ ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ರಮೇಶ್ ಯಾದವ್ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರು.

ಇಲ್ಲಿಯವರೆಗೂ ಸಾಕಷ್ಟು ಚಿತ್ರಗಳನ್ನು ನಿರ್ಮಿಸಿರುವ ಇವರು 'ಶಾಂತಿ'ಎಂಬ ಗಿನ್ನಿಸ್ ದಾಖಲೆಗೆ ಭಾಜನವಾದ ಚಿತ್ರವನ್ನು ತೆರೆಗಿತ್ತವರು. ನಿರ್ಮಾಣಕ್ಕೆ ಸೀಮಿತರಾಗದ ನಿರ್ಮಾಪಕರು ತಮ್ಮ ಸಂಸ್ಥೆಯ ಹೆಸರಿನಲ್ಲಿ ಆಡಿಯೋ ಕಂಪನಿಯನ್ನು ತೆರೆದರು.'ಕೆಂಚ' ಚಿತ್ರ ಉತ್ತಮ ಪ್ರೇಮಕಥೆಯಿಂದ ಕೂಡಿದ್ದು, ಯುವ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಹಾಕಲಿದೆ ಹಾಗೂ ಚಿತ್ರದಲ್ಲಿ ಬರುವ ಸಾಹಸ ಸನ್ನಿವೇಶಗಳು ಸಾಹಸಪ್ರಿಯರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂಬ ಅಭಿಪ್ರಾಯ ರಮೇಶ್ ಯಾದವ್ ಅವರದು.

ಪಿ.ಎನ್.ಸತ್ಯ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ. ಪಿ.ಎಲ್.ರವಿ ಛಾಯಾಗ್ರಹಣ, ವರ್ಮನ್ ಸಂಕಲನ, ಮುರುಳಿ, ದೇವ ಸಂಪತ್, ಅರವಿಂದ್ ನೃತ್ಯ ನಿರ್ದೇಶನ, ಪಳನಿರಾಜ್, ಡಿಫರೆಂಟ್ ಡ್ಯಾನಿ ಸಾಹಸ, ರಂಗಸ್ವಾಮಿ ನಿರ್ಮಾಣ ನಿರ್ವಹಣೆಯಿರುವ 'ಕೆಂಚ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್ ದೇವರಾಜ್, ಶ್ರೀಪ್ರಜ್ಞ, ಶರತ್ ಲೋಹಿತಾಶ್ವ, ಭವ್ಯ, ಪಿ.ಎನ್.ಸತ್ಯ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada