»   » ನಾಗಭರಣರಿಗೆಗೆ ಸಚಿವ ಸ್ಥಾನ; ಏನು ಉಪಯೋಗ?

ನಾಗಭರಣರಿಗೆಗೆ ಸಚಿವ ಸ್ಥಾನ; ಏನು ಉಪಯೋಗ?

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ ಅವರಿಗೆ ಸಚಿವ ಸ್ಥಾನಮಾನ ನೀಡಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ. ಮುಂದಿನ ಆದೇಶದವರೆಗೂ ಇದು ಜಾರಿಯಲ್ಲಿರುತ್ತದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಜಗನ್ನಾಥ ಪ್ರಕಾಶ್ ಈ ವಿಷಯವನ್ನು ಮಂಗಳವಾರ ತಿಳಿಸಿದ್ದಾರೆ. ನಾಗಭರಣ ಅವರಿಗೆ ಸಚಿವ ಸ್ಥಾನ ನೀಡಿರುವುದರಿಂದ ಏನು ಉಪಯೋಗ? ಎಂಬ ಪ್ರಶ್ನೆಗೆ ಅವರ ಕಾರ್ಯಚಟುವಟಿಕೆಗಳು ಮತ್ತಷ್ಟು ವಿಸ್ತರಿಸಲಿವೆ ಎಂದು ಚುಟುಕಾಗಿ ಉತ್ತರಿಸಬಹುದು. ಕ್ಯಾಬಿನೆಟ್ ದರ್ಜೆಯ ಸಚಿವರಿಗೆ ಸಿಗುವ ಸೌಲಭ್ಯಗಳೆಲ್ಲವೂ ನಾಗಾಭರಣ ಅವರಿಗೂ ಸಿಗಲಿವೆ.

ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ಆಗಲಿ ಎಂಬ ನಿರೀಕ್ಷೆ ಚಿತ್ರಪ್ರೇಮಿಗಳಲ್ಲಿದೆ. ನಾಗಾಭರಣರಿಗೆ ಸಚಿವ ಸ್ಥಾನಮಾನ ದಕ್ಕಿರುವುದರಿಂದ ಆ ನಿರೀಕ್ಷೆ ಹುಸಿಯಾಗಲಿಕ್ಕಿಲ್ಲ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಜೂನ್ 5, 2009ರಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಉದ್ಘಾಟನೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada