»   »  ಈ ವಾರ ತೆರೆಗೆ ನನ್ನೆದೆಯ ಹಾಡು

ಈ ವಾರ ತೆರೆಗೆ ನನ್ನೆದೆಯ ಹಾಡು

Subscribe to Filmibeat Kannada
ಕನ್ನಡ ವಾಕ್ಚಿತ್ರ ಅಮೃತ ಮಹೋತ್ಸವ ಆಚರಿಸುತ್ತಿರುವ ಪ್ರಸಕ್ತ ವರ್ಷದಲ್ಲಿ ಚಿತ್ರಗಳು ಆರಂಭವಾಗುತ್ತಿರುವುದು ಕಡಿಮೆಯಾದರೂ, ಬಿಡುಗಡೆಯಾಗುವಲ್ಲಿ ದಾಖಲೆ ನಿರ್ಮಾಣ ಮಾಡುವಂತೆ ಕಾಣುತ್ತಿದೆ. ಸನತ್ ಪ್ರೇಕ್ಷಿತ ಕಂಬೈನ್ಸ್ ಲಾಂಛನದಲ್ಲಿ ಸತೀಶ್‌ರಾವ್, ಸದಾಶಿವರಾವ್ ಹಾಗೂ ಸದಾನಂದರಾವ್ ನಿರ್ಮಿಸಿರುವ 'ನನ್ನೆದೆಯ ಹಾಡು ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಚಿತ್ರವನ್ನು ಗುರುವೇಂದ್ರ ನಿರ್ದೇಶಿಸಿದ್ದಾರೆ.

'ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ನವಿರಾದ ಪ್ರೇಮಕಥೆಯಿಂದ ಕೂಡಿದೆ ಹಾಗೂ ಉತ್ತಮ ಗೀತೆಗಳನೊಳಗೊಂಡ 'ನನ್ನೆದೆಯ ಹಾಡು ಹದಿಹರೆಯದವರಿಗೆ ಹತ್ತಿರವಾಗಲಿದೆ ಎಂದು ನಿರ್ದೇಶಕರು ಅಭಿಪ್ರಾಯ ಪಟ್ಟಿದ್ದಾರೆ.

ವಾಹಿನಿಯೊಂದರಲ್ಲಿ ನಿರೂಪಕನಾಗಿ ನಂತರ ಬೆಳ್ಳೆತೆರೆ ಪ್ರವೇಶಿಸಿದ ಆನಂದ್ ಈ ಚಿತ್ರದ ನಾಯಕ. ರಮ್ಯಾ ಬಾರ್ನೆ ಮತ್ತು ಛಾಯಾಶ್ರೀ ಚಿತ್ರದಲ್ಲಿ ಆನಂದನ ನಾಯಕಿಯರು. ರಮೇಶ್ ಭಟ್, ಬ್ಯಾಂಕ್ ಜನಾರ್ದನ್, ಎಂ.ಎನ್.ಸುರೇಶ್ ಮುಂತಾದವರು 'ನನ್ನದೆಯ ಹಾಡು ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.

ಹಾಡುಹಕ್ಕಿಯ ಮೌನರಾಗವೆಂಬ ಅಡಿಬರಹದೊಂದಿಗೆ ಹೊರಹೊಮ್ಮುತ್ತಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ಸಂಯೋಜಿಸಿದ್ದಾರೆ. ಬಿ.ಆರ್.ವೆಂಕಟೇಶ್ ಚಿತ್ರಕತೆ ಹಾಗೂ ಸಂಭಾಷಣೆ, ಮಲ್ಲಿಕಾರ್ಜುನ್ ಛಾಯಾಗ್ರಹಣ, ಶಿವರಾಜಮೇಹು ಸಂಕಲನ, ಇಸ್ಮಾಯಿಲ್ ಕಲೆ, ವಿಶ್ವಕುಮಾರ್ ನಿರ್ಮಾಣ ನಿರ್ವಹಣೆ, ಮೋಹನ್ ಮಂಡ್ಯ ನಿರ್ಮಾಣ ಮೇಲ್ವಿಚಾರಣೆ 'ನನ್ನೆದೆಯ ಹಾಡು ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada