»   »  'ಶರಪಂಜರ' ಪಾತ್ರ ಮಾಡಲೊಲ್ಲೆ ಎಂದ ರಮ್ಯಾ!

'ಶರಪಂಜರ' ಪಾತ್ರ ಮಾಡಲೊಲ್ಲೆ ಎಂದ ರಮ್ಯಾ!

Subscribe to Filmibeat Kannada

ಜನಪ್ರಿಯ 'ಶರಪಂಜರ' ಚಿತ್ರದಲ್ಲಿ ಮಿನುಗು ತಾರೆ ಕಲ್ಪನಾ ನಟಿಸಿದ್ದ ಪಾತ್ರದಲ್ಲಿ ತಾನು ಮತ್ತೆ ಕಾಣಿಸಿ ಕೊಳ್ಳುವುದಿಲ್ಲ ಎಂದು ರಮ್ಯಾ ಸ್ಪಷ್ಟಪಡಿಸಿದ್ದಾರೆ. ಇದರ ಬಗ್ಗೆ ಯಾರೂ ನನ್ನ ಬಳಿ ಈವರೆಗೂ ಮಾತಾಡಿಲ್ಲ. ಯಾರಾದರು ನನ್ನನ್ನು ಸಂಪರ್ಕಿಸಿದರೂ ನಾನು ಮತ್ತೆ ಈ ಪಾತ್ರದಲ್ಲಾಗಲಿ ಅಥವಾ ಚಿತ್ರದಲ್ಲಾಗಲಿ ನಟಿಸಲು ಸುತರಾಂ ಒಪ್ಪುವುದಿಲ್ಲ ಎಂದು ಖಡಾಖಂಡಿತವಾಗಿ ರಮ್ಯಾ ಹೇಳಿದ್ದಾರೆ.

ಇತ್ತೀಚೆಗೆ ಹೊಸ ನಿರ್ದೇಶಕರೊಬ್ಬರು ತ್ರಿವೇಣಿ ಕಥೆಯಾಧಾರಿತ, ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದ 'ಶರಪಂಜರ' ಚಿತ್ರವನ್ನು ಮತ್ತೆ ರಿಮೇಕ್ ಮಾಡುತ್ತೇನೆ. ಕಲ್ಪನಾ ನಟಿಸಿದ್ದ ಪಾತ್ರದಲ್ಲಿ ರಮ್ಯಾ ನಟಿಸಬೇಕೆನ್ನುವುದು ನಮ್ಮ ತಂಡದ ಆಸೆ. ನಾವು ಈವರೆಗೂ ರಮ್ಯಾ ಅವರನ್ನು ಸಂಪರ್ಕಿಸಲಿಲ್ಲ. ಅವರನ್ನು ಭೇಟಿಯಾಗಿ ಪಾತ್ರ ಮತ್ತು ಚಿತ್ರದ ಬಗ್ಗೆ ಅವರನ್ನು ಒಪ್ಪಿಸುತ್ತೇವೆ ಎನ್ನುವ ನಂಬಿಕೆ ನಮಗೆ ಇದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದರು.

ತಾನು ಕಲ್ಪನಾ ಪಾತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳುವ ಮೂಲಕಅವರ ಆಸೆಗೆ ರಮ್ಯಾ ತಣ್ಣೀರೆರಚಿದ್ದಾರೆ.ಮಿನುಗು ತಾರೆ ಕಲ್ಪನಾ ಎಂದರೆ ಸಾಕು ಇಂದಿನ ಯುವ ನಟಿಯರ ಹೃದಯ ಮಿಡಿಯುತ್ತದೆ. ಅಂತಹ ಪಾತ್ರಗಳಲ್ಲಿ ತಾವೂ ನಟಿಸಬೇಕು ಎಂಬ ಆಸೆಯನ್ನು ವ್ಯಕ್ತಪಡಿಸುತ್ತಾರೆ. ಆದರೆ ರಮ್ಯಾ ಮಾತ್ರ ಕಲ್ಪನಾ ಪಾತ್ರವನ್ನು ಒಲ್ಲೆ ಎಂದಿರುವುದು ಗಾಂಧಿನಗರದಲ್ಲಿ ಆಶ್ಚರ್ಯ ಮೂಡಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada