»   » ಶಿವರಾಜ್ ಕುಮಾರ್ ಹೆಬ್ಬೆಟ್ಟಿಗೆ ನಟಿ ಶ್ರುತಿ ಹಾಸನ್

ಶಿವರಾಜ್ ಕುಮಾರ್ ಹೆಬ್ಬೆಟ್ಟಿಗೆ ನಟಿ ಶ್ರುತಿ ಹಾಸನ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಚಿತ್ರಕ್ಕೆ 'ಹೆಬ್ಬೆಟ್ಟು' ಎಂದು ಹೆಸರಿಡಲಾಗಿದೆ. ಚಿತ್ರದ ಹೆಸರೇ ಹೇಳುವಂತೆ ಚಿತ್ರದ ನಾಯಕ ನಟ ಅನಕ್ಷರಸ್ಥ. ಸುದೀರ್ಘ ಸಮಯದ ಬಳಿಕ ಮತ್ತೆ ಶಿವಣ್ಣ ಈ ಚಿತ್ರದಲ್ಲಿ ಮಚ್ಚು ಕೈಗೆತ್ತಿಕೊಳ್ಳುತ್ತಿದ್ದಾರೆ. 'ಓಂ' ಚಿತ್ರದಂತೆ 'ಹೆಬ್ಬೆಟ್ಟು' ಚಿತ್ರ ಶಿವಣ್ಣ ವೃತ್ತಿಜೀವನದಲ್ಲಿ ತಿರುವ ನೀಡುವ ನಿರೀಕ್ಷೆಯಿದೆ ಎನ್ನುತ್ತಾರೆ ನಿರ್ದೇಶಕ ಲೇಖನ್.

ಈಗಾಗಲೆ ಚಿತ್ರದ ಶೀರ್ಷಿಕೆಯನ್ನು ಫಿಲಂ ಚೇಂಬರ್‌ನಲ್ಲಿ ದಾಖಲಿಸಿಕೊಳ್ಳಲಾಗಿದೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಲೇಖನ್ ಅವರು ಈ ಹಿಂದೆ 'ಸಿಹಿಗಾಳಿ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಹೆಬ್ಬೆಟ್ಟಾದ ಚಿತ್ರದ ನಾಯಕ ನಟ ಹಂತಹಂತವಾಗಿ ಮೇಲೇರಿ ಸಮಾಜ ಹಾಗೂ ರಾಷ್ಟ್ರಮಟ್ಟದಲ್ಲಿ ಉತ್ತಮ ಹೆಸರು ಸಂಪಾದಿಸುವುದೇ ಚಿತ್ರದ ಕತೆ.

ಸದ್ಯಕ್ಕೆ ಶಿವಣ್ಣ ಹಲವಾರು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಅವುಗಳಲ್ಲಿ ಶಿವ, ಲಕ್ಷ್ಮಿ ಹಾಗೂ ಅಂದರ್ ಬಾಹರ್ ಚಿತ್ರಗಳಿಗೆ ಶೂಟಿಂಗ್ ಭರದಿಂದ ಸಾಗುತ್ತಿದೆ. 'ಅಂದರ್ ಬಾಹರ್' ಚಿತ್ರದ ಬಳಿಕ 'ಹೆಬ್ಬೆಟ್ಟು' ಸೆಟ್ಟೇರಲಿದೆ. ಅಂದಹಾಗೆ ಚಿತ್ರಕ್ಕೆ ಶ್ರುತಿ ಹಾಸನ್ ಅವರನ್ನು ಕರೆತರುವ ಬಗ್ಗೆ ಪ್ಲಾನ್ ಮಾಡಲಾಗಿದೆ. ಈ ಚಿತ್ರದ ನಾಯಕಿ ಪಾತ್ರಕ್ಕೆ ಶ್ರುತಿ ಹೇಳಿ ಮಾಡಿಸಿದ ಮುಖವಂತೆ. ಆದರೆ ಇನ್ನೂ ಪಕ್ಕಾ ಆಗಿಲ್ಲ. ಆಕೆಯನ್ನು ಕನ್ನಡಕ್ಕೆ ಕರೆತರುವ ಬಗ್ಗೆ ನಿರ್ದೇಶಕರು ಆಶಾಭಾವದಿಂದಿದ್ದಾರೆ. (ಏಜೆನ್ಸೀಸ್)

English summary
Hat Trick Hero Shivrajkumar's new film titled as Hebbettu. The movie is being directing by Lekhan. According to director Lekhan actress Shruti Hassan is the right choice.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada