twitter
    For Quick Alerts
    ALLOW NOTIFICATIONS  
    For Daily Alerts

    ಡಬ್ಬಿಂಗ್ ಕನ್ನಡ ಚಿತ್ರರಂಗಕ್ಕೆ ದ್ರೋಹ ಬಗೆದಂತೆ: ವಾಟಾಳ್

    By Rajendra
    |

    ತಮ್ಮ ವಿಶಿಷ್ಟ ಚಳವಳಿಗಳ ಮೂಲಕ ಹೆಸರಾದವರು ವಾಟಾಳ್ ನಾಗರಾಜ್. ಈಗವರು ಡಬ್ಬಿಂಗ್ ಚಿತ್ರಗಳ ವಿರುದ್ಧ ಗರ್ಜಿಸಿದ್ದಾರೆ. ಡಬ್ಬಿಂಗ್ ಚಿತ್ರ ಬಂದರೆ ತಾವು ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷರೂ ಆಗಿರುವ ವಾಟಾಳ್.

    ಐವತ್ತು ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಚಿತ್ರಗಳ ಹಾವಳಿ ಬರುವ ಸೂಚನೆ ಇದೆ. ಹಾಗೇನಾದರೂ ಆದರೆ ಬೀದಿಗಿಳಿದು ಹೋರಾಡುವುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಡಬ್ಬಿಂಗ್ ಚಿತ್ರಗಳಿಂದ ಕನ್ನಡ ಸಂಸ್ಕೃತಿ, ಕಲೆ, ಸಾಹಿತ್ಯ ಸಂಪೂರ್ಣ ನಾಶವಾಗಲಿದೆ ಎಂದಿದ್ದಾರೆ.

    ಡಬ್ಬಿಂಗ್ ಚಿಂತನೆ ಕನ್ನಡ ಚಿತ್ರರಂಗಕ್ಕೆ ದ್ರೋಹ ಬಗೆದಂತೆ. ಕನ್ನಡದ ಕಲಾವಿದರು ಬೀದಿಪಾಲಾಗುತ್ತಾರೆ. ಕನ್ನಡ ಚಿತ್ರರಂಗ ನೆಲೆಕಳೆದುಕೊಳ್ಳುತ್ತದೆ ಎಂದ ಅವರು ಕನ್ನಡ ಚಿತ್ರಗಳನ್ನು ಬಾಲಕೃಷ್ಣ ಅವರ ಅಭಿಮಾನ್ ಸೇರಿದಂತೆ ರಾಜ್ಯದ ಸ್ಟುಡಿಯೋಗಳಲ್ಲಿ ಚಿತ್ರೀಕರಿಸಬೇಕು ಎಂದು ಒತ್ತಾಯಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Vatal Nagaraj, the president of the Kannada Chaluvali Vatal Paksha, has opposed the dubbing movies in Kannada. Addressing a press meet in Bangalore, the veteran Kannada activist has insisted that dubbing is a bane to Kannada films and he will fight against this dubbing culture.
    Thursday, May 26, 2011, 11:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X