»   » ಪುಸ್ತಕ ರೂಪದಲ್ಲಿ ಡಾ.ರಾಜ್ ಬಾಳಪುಟಗಳು

ಪುಸ್ತಕ ರೂಪದಲ್ಲಿ ಡಾ.ರಾಜ್ ಬಾಳಪುಟಗಳು

Posted By:
Subscribe to Filmibeat Kannada

ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ವರನಟ ಡಾ.ರಾಜ್ ಕುಮಾರ್ ಕುರಿತ ಪುಸ್ತಕ ಏಪ್ರಿಲ್ 24ರಂದು ಲೋಕಾರ್ಪಣೆಯಾಗಲಿದೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ ಪುಸ್ತಕವನ್ನು ಮಾರುಕಟ್ಟೆ ಮಾಡಲು ಟೈಮ್ಸ್ ಗ್ರೂಪ್ ಮುಂದೆ ಬಂದಿದೆ ಎಂದು ಪುನೀತ್ ರಾಜ್ ಕುಮಾರ್ ತಿಳಿಸಿದ್ದಾರೆ.

ಪುಸ್ತಕದ ಬೆಲೆ ಶೀಘ್ರದಲ್ಲೆ ನಿಗದಿಯಾಗಲಿದ್ದು ಸುಮಾರು ರು.2,500ರಷ್ಟು ಬೆಲೆ ನಿಗದಿ ಮಾಡುವ ಸಾಧ್ಯತೆ ಇದೆ. ಪುಸ್ತಕದಲ್ಲಿ ಶೇ.70ರಷ್ಟು ಚಿತ್ರಗಳು ಹಾಗೂ ಶೇ.30ರಷ್ಟು ಮಾಹಿತಿ ಇಂಗ್ಲಿಷ್ ನಲ್ಲಿದೆ. ಬಿಗ್ ಬಿ ಅಮಿತಾಬ್ ಬಚ್ಚನ್ ಕುರಿತ ಪುಸ್ತಕದ ಮಾದರಿಯಲ್ಲಿ ಡಾ.ರಾಜ್ ಕುಮಾರ್ ಪುಸ್ತಕವಿರುತ್ತದೆ ಎಂದು ಪುನೀತ್ ರಾಜ್ ಕುಮಾರ್ ವಿವರ ನೀಡಿದ್ದಾರೆ.

ಈ ಪುಸ್ತಕ ರಾಜ್ ಕುಮಾರ್ ಅವರ 2500 ಕ್ಕೂ ಹೆಚ್ಚು ಅಪರೂಪದ ಚಿತ್ರಗಳನ್ನು ಒಳಗೊಂಡಿದೆಯಂತೆ. ಅಂದಹಾಗೆ ಪುನೀತ್ ಅಭಿನಯದ 'ಪೃಥ್ವಿ' ಚಿತ್ರವನ್ನು ಏಪ್ರಿಲ್ 23ರಂದು ತೆರೆಗೆ ತರುವ ಸಿದ್ಧತೆ ನಡೆದಿದೆ. ಪುನೀತ್ ಮತ್ತು ಪಾರ್ವತಿ ಮೆನನ್ ಜೋಡಿಯನ್ನು ಪ್ರೇಕ್ಷಕರು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

Please Wait while comments are loading...