»   » ಸದ್ಯದಲ್ಲೇ ತೆರೆಯ ಮೇಲೆ ಬರಲಿದ್ದಾರೆ ರಾಧಿಕಾ

ಸದ್ಯದಲ್ಲೇ ತೆರೆಯ ಮೇಲೆ ಬರಲಿದ್ದಾರೆ ರಾಧಿಕಾ

Posted By:
Subscribe to Filmibeat Kannada

ನಟಿ ರಾಧಿಕಾ ನಿರ್ಮಾಪಕಿಯಾಗಿ ಇತ್ತೀಚಿಗಷ್ಟೆ ರಮ್ಯಾ ಹಾಗೂ ಯಶ್ ತಾರಾಗಣದಲ್ಲಿ 'ಲಕ್ಕಿ' ಚಿತ್ರ ಮತ್ತು ಆಡಿಯೋ ಬಿಡುಗಡೆ ಮಾಡಿ ಮುಗಿಸಿ ಹಾಯಾಗಿದ್ದಾರೆ. ಫೆಬ್ರವರಿಯಲ್ಲಿ ಲಕ್ಕಿ ಚಿತ್ರ ಬಿಡುಗಡೆ ಆಗಲಿದೆ. ಆಡಿಯೋ ಬಿಡುಗಡೆ ವೇಳೆ "ನನಗೆ ಸೂಕ್ತ ಎನಿಸುವ ಒಳ್ಳೆಯ ಕಥೆ ಸಿಕ್ಕರೆ ಮತ್ತೆ ನಟಿಸುತ್ತೇನೆ" ಎಂದಿದ್ದಾರೆ ರಾಧಿಕಾ. ಆದರೆ ಅದಕ್ಕೂ ಮೊದಲೇ ರಾಧಿಕಾರನ್ನು ತೆರೆಯ ಮೇಲೆ ನೋಡುವ ಭಾಗ್ಯ ಸಿಗಲಿದೆ.

ಅದು ಹೇಗೆಂದರೆ ಚಿತ್ರರಂಗದಿಂದ ಗ್ಯಾಪ್ ತೆಗೆದುಕೊಳ್ಳುವ ಮೊದಲೇ ರಾಧಿಕಾ ಹಾಗೂ ಆದಿತ್ಯ ಅಭಿನಯದ ಚಿತ್ರ 'ಈಶ್ವರಿ' ತೆರೆಗೆ ಬರಲು 2007ರಲ್ಲಿ ರೆಡಿಯಾಗಿತ್ತು. ಆದರೆ ಅದನ್ನು ರಾಧಿಕಾ ಖರೀದಿಸಿ ಬಿಡುಗಡೆ ಮಾಡದೇ ಇಟ್ಟುಕೊಂಡಿದ್ದರು. ಆದರೆ ಈಗ ಅದಕ್ಕೆ ವಿತರಕಿಯೂ ಆಗಿರುವ ರಾಧಿಕಾ, ಅದನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ.

ಈ ಮೊದಲು ರಮ್ಯಾ ಹಾಗೂ ರಕ್ಷಿತಾ ಕಾಲದಲ್ಲಿ ಸಾಕಷ್ಟು ಮಿಂಚಿ ಕನ್ನಡಿಗರಿಗೆ ಚಿರಪರಿಚಿತ ಎನಿಸಿದ್ದ ರಾಧಿಕಾರನ್ನು ಈಶ್ವರಿ ಚಿತ್ರದ ಮೂಲಕ ಮತ್ತೆ ನೋಡುವ ಕಾಲ ಕನ್ನಡಿಗರ ಪಾಲಿಗೆ ಬಂದಿದೆ. ಲಕ್ಕೀ ಚಿತ್ರಕ್ಕಿಂತಲೂ ಮೊದಲೇ ಈಶ್ವರಿ ಚಿತ್ರ ಬಿಡುಗಡೆಯಾದರೂ ಆಶ್ಚರ್ಯವಿಲ್ಲ. ಎಲ್ಲವೂ ನಟಿ, ನಿರ್ಮಾಪಕಿ ರಾಧಿಕಾ ನಿರ್ಧಾರದ ಮೇಲೆ ನಿಂತಿದೆ. (ಒನ್ ಇಂಡಿಯಾ ಕನ್ನಡ)

English summary
Actress Radhika and Aditya starer movie 'Ishwar' Releases very soon through Radhika Distribution. As sources are concerned this Ishwar will come to screen before the release of movie 'Lucky', on 24th Feb, 2012. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada