»   » 'ಲಕ್ಕಿ' ರಾಧಿಕಾ ಬಗ್ಗೆ ರಮ್ಯಾ ಹೇಳಿದ ಮಾತುಗಳು

'ಲಕ್ಕಿ' ರಾಧಿಕಾ ಬಗ್ಗೆ ರಮ್ಯಾ ಹೇಳಿದ ಮಾತುಗಳು

Posted By:
Subscribe to Filmibeat Kannada

ನಟಿ ರಮ್ಯಾ ಲಕ್ಕಿ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. "ಲಕ್ಕಿ ಚಿತ್ರ ಒಪ್ಪಿಕೊಳ್ಳಲು ಕಾರಣ ನಿರ್ಮಾಪಕಿ ರಾಧಿಕಾ ಎಂಬುದು ಒಂದು ಕಾರಣವಾದರೆ ಆಕೆ ಮಹಿಳಾ ನಿರ್ಮಾಪಕಿ ಎಂಬುದು ಇನ್ನೊಂದು. ಚಿತ್ರರಂಗಕ್ಕೆ ಒಬ್ಬ ನಿರ್ಮಾಪಕಿ ಕಾಲಿಟ್ಟಾಗ ಒಬ್ಬ ಮಹಿಳೆಯಾಗಿ ಆಕೆಯ ಜೊತೆ ನಾನಿರುವುದು ಕರ್ತವ್ಯ" ಎಂದಿದ್ದಾರೆ.

ಒಂದು ಕಾಲದಲ್ಲಿ ರಮ್ಯಾ, ರಕ್ಷಿತಾ ಮತ್ತು ರಾಧಿಕಾ ಮಧ್ಯೆ ತೀವೃ ಪೈಪೋಟಿಯಿತ್ತು. ಅದರ ಬಗ್ಗೆ ರಮ್ಯಾ "ಒಂದೇ ವೇಳೆಯಲ್ಲಿ ಚಿತ್ರರಂಗದಲ್ಲಿದ್ದಾಗ ಸಹಜವಾಗಿ ಪೈಪೋಟಿಯಿತ್ತು. ಆದರೆ ನಾವೆಲ್ಲರೂ ಒಬ್ಬರನ್ನೊಬ್ಬರು ಗೌರವಿಸುತ್ತಿದ್ದೆವು. ನಾವು ಮೂವರಲ್ಲಿಯೇ ಅತ್ಯಂತ ಪ್ರತಿಭಾನ್ವಿತೆ ರಾಧಿಕಾ. ಕಡಿಮೆ ಅವಧಿಯಲ್ಲಿಯೇ ವೈವಿಧ್ಯಮಯ ಹಾಗೂ ಸವಾಲಿನ ಪಾತ್ರಗಳನ್ನು ಮಾಡಿ ನಟನೆ ಮತ್ತು ನೃತ್ಯದಲ್ಲಿ ಆಕೆ ಒಂದು ಕೈ ಮೇಲೆಯೇ ಇದ್ದರು".

ಇನ್ನು ನಿರ್ಮಾಪಕಿಯಾಗಿ ರಾಧಿಕಾ ದಿ ಬೆಸ್ಟ್. ಚಿತ್ರನಿರ್ಮಾಣದ ಸಮಸ್ಯೆಗಳ ಅರಿವು ಅವರಿಗೆ ಚೆನ್ನಾಗಿದೆ. ನಿರ್ದೇಶಕರು ಕೇಳಿದ ಯಾವುದಕ್ಕೂ ಇಲ್ಲ ಇನ್ನದೇ ಬೆಂಬಲ ನೀಡಿದ್ದಾರೆ. ನಾನು ನೋಡಿದ ನಿರ್ಮಾಪಕರಲ್ಲೇ ಅತ್ಯಂತ ಲಿಬರಲ್. ಸೆಟ್ ಗೆ ಬಂದು ಚಿತ್ರೀಕರಣವನ್ನು ಎಂಜಾಯ್ ಮಾಡುತ್ತಿದ್ದರು. ನಟನೆಯನ್ನು ಮಿಸ್ ಮಾಡಿಕೊಂಡಿರುವ ಅವರು ಮತ್ತೆ ನಟಿಸಬೇಕೆನ್ನುವುದು ನನ್ನಾಸೆ. ಅವರು ನಟನೆಗೂ ಮರಳಿದರೆ ನಾನು ಬಂಬೆಲ ಸೂಚಿಸುತ್ತೇನೆ" ಎಂದು ತಮ್ಮ ಮನದಾಸೆಯನ್ನು ಬಿಚ್ಚಿಟ್ಟಿದ್ದಾರೆ ರಮ್ಯಾ. (ಒನ್ ಇಂಡಿಯಾ ಕನ್ನಡ)

English summary
Actress Ramya told that Radhika is my Best Friend. Ramya acted in the Radhika produced movie Lucky with actor Yash. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada