twitter
    For Quick Alerts
    ALLOW NOTIFICATIONS  
    For Daily Alerts

    ಕ್ರೈಂ ಸ್ಟೋರಿ ಬಾಲಕೃಷ್ಣ ಕಾಕತ್ಕರ್ ಮರೆಯದ ಮಾತು

    By Rajendra
    |

    Journalist Balakrishna Kakatkar
    ಪತ್ರಕರ್ತ ಬಾಲಕೃಷ್ಣ ಕಾಕತ್ಕರ್ ಅವರು ಟಿವಿಯಲ್ಲಿ ನಡೆಸಿಕೊಡುತ್ತಿದ ಜನಪ್ರಿಯ ಕಾರ್ಯಕ್ರಮ 'ಮರೆಯದ ಮಾತು' ಈಗ ಸೀಡಿ ರೂಪದಲ್ಲಿ ಹೊರಬಂದಿದೆ. ಗಾಂಧಿನಗರದಲ್ಲಿ ಹೊಸ ನಿರ್ಮಾಪಕರ ಆಪದ್ಭಾಂಧವ ಎಂದೇ ಹೆಸರಾದ ಲಹರಿ ಆಡಿಯೋ ಸಂಸ್ಥೆಯ ವೇಲು ಅವರೇ ಈ ಅಪರೂಪದ ಮಾಲಿಕೆಗಳನ್ನು ಮುದ್ರಿಸಿ ಮಾರುಕಟ್ಟೆಗೆ ತಂದಿದ್ದಾರೆ.

    ಈ ಧ್ವನಿಮುದ್ರಿಕೆಯ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಟಿ.ಎಸ್.ನಾಗಾಭರಣ, ವಿ.ಮನೋಹರ್, ಡಾ.ವಿಜಯಮ್ಮ, ಲಹರಿ ವೇಲು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಅಭಿಮಾನಿ ಪತ್ರಿಕೆಯಲ್ಲಿ ನಾನು ಬಾಲಕೃಷ್ಣ ಕಾಕತ್ಕರ್ ಜೊತೆ ಕೆಲಸ ಮಾಡಿದ್ದೆ. ಆತ ಬಹುಮುಖ ಪ್ರತಿಭಾವಂತ. ದಾರಿ ಹುಡುಕುತ್ತಾ ಟಿ ವಿ ಮಾಧ್ಯಮದಲ್ಲಿ ಹೆಸರು ಮಾಡಿದ ಎಂದರು ಸಂಗೀತ ನಿರ್ದೇಶಕ ವಿ ಮನೋಹರ್.

    ನಾನು ಚಿತ್ರರಂಗಕ್ಕೆ ಬಂದ ಈ ಮಾಲಿಕೆಯಲ್ಲಿ ಜನ ಸಾಮಾನ್ಯರ ಸೂಕ್ಷ್ಮ ಸ್ಥಿತಿಗತಿಗಳನ್ನು ಗಮನಿಸಿ ಪ್ರಸ್ತಾಪಿಸಿದ್ದಾನೆ. ರಸ್ತೆಬದಿಯಲ್ಲಿ ಬೋಂಡ ಮಾಡುವ ಹೆಂಗಸಿನ ಮನಸ್ಥಿತಿ, ಮಸಾಲೆಪುರಿ ವ್ಯಾಪಾರಿಯ ಯೋಚನೆ ಇಂಥದೇ ಸಾಮಾನ್ಯ ವಿಷಯಗಳನ್ನು ಪ್ರಸ್ತಾಪಿಸಿದ್ದಾನೆ ಎಂದು ವಿ.ಮನೋಹರ್ ಸ್ನೇಹಿತನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

    ನಾಗಾಭರಣ, ಡಾ.ವಿಜಯಮ್ಮ ಅವರು ತಮ್ಮ ಹಾಗೂ ಕಾಕತ್ಕರ್ ಒಡನಾಟ ಹಾಗೂ ಬರವಣಿಗೆಯ ಚಾತುರ್ಯಗಳನ್ನು ಕೊಂಡಾಡಿದರು.ಕೊನೆಯಲ್ಲಿ ಮಾತನಾಡಿದ ಲಹರಿ ವೇಲು ಬಾಲಕೃಷ್ಣ ಕಾಕತ್ಕರ್ ತಮ್ಮ ವಿಶಿಷ್ಟ ಕಂಠದಿಂದಲೇ ರಾಜ್ಯದಾದ್ಯಂತ ಹೆಸರು ಮಾಡಿದ್ದರು. ಈ ಸೀಡಿಯಲ್ಲಿ ಅವರು ಸಾಮಾನ್ಯ ಮನುಷ್ಯನ ಮನದ ಮಾತುಗಳನ್ನು ತೆರೆದೆಟ್ಟಿದ್ದಾರೆ. ತುಂಬಾ ಅದ್ಭುತವಾಗಿ ಮಾತನಾಡಿದ್ದಾರೆ ಎಂದು ಪ್ರಶಂಸಿಸಿದ್ದರು.

    ಸ್ನೇಹಿತರೆಲ್ಲರ ಅಪಾರ ಪ್ರೀತಿಯ ಮಾತುಗಳಿಂದ ಕಾಕತ್ಕರ್ ಒಂದು ಕ್ಷಣ ಭಾವುಕರಾದರು. ಈ ಧ್ವನಿಮುದ್ರಿಕೆಗೆ ಕೈಜೋಡಿಸಿದ, ನಿರೂಪಣೆ, ಸಾಹಿತ್ಯ ಬರೆದ ಕಾಫಿ ರಾಘವೇಂದ್ರ ಅವರಿಗೆ ಕೃತಜ್ಞತೆ ಅರ್ಪಿಸಿದರು. ವೇಲು ಮೆಚ್ಚುಗೆ ಹೇಳಲೆಂದು ಫೋನ್ ಮಾಡಿದಾಗ ಫೋನ್ ಮಾಡಿ ಹೇಳಿದರೆ ಸಾಲದು ಸೀಡಿ ಮಾಡಿಕೊಡಿ ಎಂದು ಸುಮ್ಮನೇ ಹೇಳಿದ್ದೆ. ಆದರೆ ವೇಲು ಅದನ್ನು ಕಾರ್ಯಗತ ಮಾಡಿಯೇ ಬಿಟ್ಟರು.

    ನನಗನ್ನಿಸಿದ್ದನ್ನು ಮಾತನಾಡಿದ್ದೇನೆ. ಅದು ಜನರಿಗೆ ಹಿಡಿಸಿದೆ ಎಂದು ಸೀಡಿ ಮಾಡಲು ಜೊತೆಯಾದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಇಡೀ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ ಪತ್ರಕರ್ತ ಆರ್.ಜಿ.ವಿಜಯಸಾರಥಿ ಅವರ ಮಾತುಗಳು ಸಾಕಷ್ಟು ಮಾಹಿತಿ ನೀಡಿದಂತಿದ್ದವು. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Udaya TV's 'Crime Story' fame journalist Balakrishna Kakatkar's one more TV programme Mareyada Maatu is now available in CD format. Recently the CD released by Lahari audio company.
    Monday, June 27, 2011, 12:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X