»   » ಸಿನಿಮಾ ಲೋಕದಲ್ಲಿ ಮಿಂಚುವವರಿಗೆ ಮಾತ್ರ

ಸಿನಿಮಾ ಲೋಕದಲ್ಲಿ ಮಿಂಚುವವರಿಗೆ ಮಾತ್ರ

Posted By:
Subscribe to Filmibeat Kannada
Career in film direction
ಸಿನಿಮಾ ಲೋಕದಲ್ಲಿ ಮಿಂಚಬೇಕು ಎಂಬ ಆಸೆಯಿದೆಯೇ? ಎಷ್ಟೋ ಜನ ಯುವಕರು ನಾನೂ ಅಣ್ಣಾವ್ರ ತರಹ ಅಭಿನಯಿಸಬೇಕು. ಸಾಹಸ ಸಿಂಹನ ತರಹ ಸ್ಟೈಲ್ ಮಾಡ್ಬೇಕು. ನವರಸ ನಾಯಕನಂತೆ ನಕ್ಕು ನಲಿಸಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಆದರೆ ಅದು ಹಗಲುಗನಸಾಗಿಯೇ ಉಳಿಯುತ್ತದೆ. ನಿಮ್ಮ ಕನಸನ್ನು ನಾವು ಸಾಕಾರ ಮಾಡುತ್ತೇವೆ ಎನ್ನುತ್ತಿದೆ ಇಲ್ಲೊಂದು ಸಂಸ್ಥೆ.

ಸಿನಿಮಾ ಕ್ಷೇತ್ರದಲ್ಲಿ ತನ್ನದೇ ಆದಂತಹ ಸಾಧನೆ ಮಾಡಿರುವ ರಾಮೋಜಿ ಗ್ರೂಪ್ ನಟರಾಗಬೇಕೆಂದು ಕನಸು ಹೊತ್ತವರಿಗೆ ಕರೆ ನೀಡಿದೆ. 'ರಾಮೋಜಿ ಅಕಾಡೆಮಿ ಆಫ್ ಫಿಲಂ ಅಂಡ್ ಟೆಲಿವಿಷನ್' ಸಂಸ್ಥೆ ಆಸಕ್ತರಿಗಾಗಿ ಅರ್ಜಿ ಆಹ್ವಾನಿಸಿದೆ. ನಿಮ್ಮಲ್ಲಿನ ನಟನನ್ನು ಹೊರಗೆ ತರುವ ಪ್ರಯತ್ನಕ್ಕೆ ತಡಯಾಕೆ?

ಎರಡು ವರ್ಷದ ಪೋಸ್ಟ್ ಗ್ರಾಜ್ಯುಯೇಷನ್ ಡಿಪ್ಲೊಮಾ ಇನ್ ಚಿತ್ರ ನಿರ್ದೇಶನ, ಸಿನಿಮಾಟೋಗ್ರಫಿ, ಅಭಿನಯ, ಸಂಕಲನ, ಧ್ವನಿ ಮುದ್ರಣ ಮತ್ತು ಧ್ವ್ವನಿ ವಿನ್ಯಾಸದಲ್ಲಿ ಒಂದು ವರ್ಷ ಕಾಲಾವಧಿಯ ಡಿಪ್ಲೊಮಾ ಪದವಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : (08415)246555 extn: 6705. ಅಂತರ್ಜಾಲಕ್ಕೂ ಭೇಟಿ ನೀಡಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada