»   » ಕನ್ನಡ ಚಿತ್ರರಂಗದ ಹಾಸ್ಯ ನಟ ಬಿ ಕೆ ಶಂಕರ್ ನಿಧನ

ಕನ್ನಡ ಚಿತ್ರರಂಗದ ಹಾಸ್ಯ ನಟ ಬಿ ಕೆ ಶಂಕರ್ ನಿಧನ

Posted By:
Subscribe to Filmibeat Kannada
Comedy actor BK Shanker Passes away
ಇನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಹಾಸ್ಯ ನಟ ಬಿ ಕೆ ಶಂಕರ್(55) ತಮ್ಮ ಸ್ವಸ್ಥಳ ಗದಗದಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಬಿ ಕೆ ಶಂಕರ್ ಜಾಂಡೀಸ್ ನಿಂದ ಬಳಲುತ್ತಿದ್ದರು. ಕನ್ನಡ ಚಿತ್ರರಂಗದ ಬಹುಪಾಲು ಎಲ್ಲ ನಾಯಕ ನಟರೊಂದಿಗೂ ಅಭಿನಯಿಸಿದ ಖ್ಯಾತಿ ಶಂಕರ್ ಅವರದು.

ಹುಬ್ಬಳ್ಳಿ ಧಾರವಾಡಭಾಷೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಶಂಕರ್ ತಮ್ಮ ಹಾಸ್ಯ ಪಾತ್ರಗಳಿಂದ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಪತ್ನಿ, ಒಬ್ಬ ಮಗ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಶಂಕರ್ ಅಗಲಿದ್ದಾರೆ. ಶಾಲಾ ಕಾಲೇಜು ದಿನಗಳಲ್ಲೇ ರಂಗಭೂಮಿ ಚಟುವಟಿಕೆಗಳಲ್ಲಿ ಶಂಕರ್ ತೊಡಗಿಕೊಂಡಿದ್ದರು.

'ಗಣೇಶನ ಗಲಾಟೆ', 'ಗಣೇಶ ಸುಬ್ರಹ್ಮಣ್ಯ', 'ಗೌರಿ ಗಣೇಶ' ಮುಂತಾದ ಚಿತ್ರಗಳಲ್ಲಿ ತಮ್ಮ ವಿಭಿನ್ನ ಡೈಲಾಗ್ಸ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಶಂಕರ್ ನಟಿಸಿದ ಮೊದಲ ಚಿತ್ರ 'ಸಂಚಾರಿ' ಆದರೆ ಮೊದಲು ಬಿಡುಗಡೆ ಕಂಡಿದ್ದು 'ಅತ್ತೆಗೆ ತಕ್ಕ ಸೊಸೆ' ಚಿತ್ರ. 1980ರ ನಂತರ ಬಹುತೇಕ ಎಲ್ಲ ಕನ್ನಡ ಚಿತ್ರಗಳಲ್ಲಿ ಶಂಕರ್ ಕಾಣಿಸಿಕೊಂಡಿದ್ದರು. ಶಂಕರ್ ಅವರ ಅಂತ್ಯಕ್ರಿಯೆ ಶನಿವಾರ ಗದಗದಲ್ಲಿ ನೆರವೇರಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada