»   » ರವಿಮಾಮ ಅಂದ್ರೆ ವಿಜಯ್‌‍ಗೂ ಆದಿತ್ಯನಿಗೂ ಇಷ್ಟವಂತೆ!

ರವಿಮಾಮ ಅಂದ್ರೆ ವಿಜಯ್‌‍ಗೂ ಆದಿತ್ಯನಿಗೂ ಇಷ್ಟವಂತೆ!

Posted By:
Subscribe to Filmibeat Kannada

ಇಬ್ಬರು ಮಾಸ್ ಹೀರೋಗಳು ಲವ್ಲಿ ಚಿತ್ರಗಳ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಇಷ್ಟಪಟ್ಟಿದ್ದಾರೆ. ಅವರು ಬೇರಾರು ಅಲ್ಲ ದುನಿಯಾ ವಿಜಯ್ ಹಾಗೂ 'ಡೆಡ್ಲಿ' ಆದಿತ್ಯ, ಇವರಿಬ್ಬರದ್ದೂ ಒಂದೇ ಆಸೆ. ಅದೇನೆಂದರೆ ಕನಸುಗಾರನ ನಿರ್ದೇಶನದಲ್ಲಿ ನಟಿಸಬೇಕು ಎಂಬುದು.

ರವಿಚಂದ್ರನ್ ಅವರಷ್ಟು ಸೊಗಸಾಗಿ ಲವ್ ಸ್ಟೋರಿಗಳನ್ನು ಇನ್ಯಾರು ತೆಗೆಯಲ್ಲ ಎಂಬ ಕಾಮೆಂಟ್ ಅವರದು. ಇದನ್ನು ಇವರಿಬ್ಬರೂ 'ಟಿಪ್ಪು' ಚಿತ್ರ ಸೆಟ್ಟೇರಿದ ಸಂದರ್ಭದಲ್ಲಿ ತಿಳಿಸಿದರು. ವೇದಿಕೆಯಲ್ಲೇ ಇದ್ದ ರವಿಚಂದ್ರನ್ ದೇಶಾವರಿ ನಗೆಬೀರಿದರು.

ಎಂ ಎಸ್ ರಮೇಶ್ ಆಕ್ಷನ್, ಕಟ್ ಹೇಳುತ್ತಿರುವ ಟಿಪ್ಪು ಚಿತ್ರದಲ್ಲಿ ರಾಗಿಣಿ ದ್ವಿವೇದಿ ಹಾಗೂ ಆದಿತ್ಯ ಮುಖ್ಯಭೂಮಿಕೆಯಲ್ಲಿದ್ದಾರೆ. ರವಿಚಂದ್ರನ್ ಹಾಗೂ ದುನಿಯಾ ವಿಜಯ್ ಚಿತ್ರಕ್ಕೆ ಶುಭ ಹಾರೈಸಲು ಬಂದಿದ್ದರು. ಚಿತ್ರದ ಸೆಟ್‌ನಲ್ಲೆ ರಾಗಿಣಿ ಅವರ ಬರ್ತ್ ಡೇ ಕೇಕನ್ನು ಕತ್ತರಿಸಿದ ಹುಟ್ಟುಹಬ್ಬ ಸಂಭ್ರಮವನ್ನು ಆಚರಿಸಿಕೊಂಡದ್ದು ವಿಶೇಷವಾಗಿತ್ತು. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Kannada actors Duniya Vijay and Aditya expressed their desire to work under Crazy Star Ravichandran's direction, for they believe that no one makes love stories like the way he does in Sandalwood. They participated in Kannada movie Tippu launch programme.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada