»   » ಆಟೋ ರಾಜ'ದಿಂದ ಅಜಯ್ ಔಟ್: ಯಶಸ್ ಇನ್?

ಆಟೋ ರಾಜ'ದಿಂದ ಅಜಯ್ ಔಟ್: ಯಶಸ್ ಇನ್?

Posted By:
Subscribe to Filmibeat Kannada
ಆಟೋ ರಾಜ ಬದಲಾಗಲಿದ್ದಾನೆ. ಆಟೋ ರಾಜ ಚಿತ್ರದಿಂದ ನಟ ಅಜಯ್ ರಾವ್ ಹೊರಬಂದಿದ್ದಾರೆ. ಅವರು ನೀಡಿರುವ ಕಾರಣ, 'ನಾನು ಬೇರೆ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೇನೆ'. 'ಕಳ್ಳ ಮಳ್ಳ ಸುಳ್ಳ' ಚಿತ್ರದ ನಂತರ ನಿರ್ದೇಶಕ ಉದಯ ಪ್ರಕಾಶ್ ನಿರ್ದೇಶಿಸಿಬೇಕಾಗಿದ್ದ ಚಿತ್ರ ಇದಾಗಿತ್ತು. ಶಂಕರ್ ನಾಗ್ ಕುರಿತ ಚಿತ್ರ ಇದು ಎಂದು ಹೇಳಲಾಗಿತ್ತು.

'ಆಟೋ ರಾಜ' ಚಿತ್ರಕ್ಕೆ ಪ್ರೇಕ್ಷಕರು ಆಯ್ಕೆ ಮಾಡಿರುವ ಹೀರೋ ಅಜಯ್ ರಾವ್. ಚಿತ್ರತಂಡವೇ ಜಾಹೀರಾತು ನೀಡಿ, ಕೊನೆಗೆ ಅಜಯ್ ರಾವ್ ಆಯ್ಕೆ ಆಗಿದ್ದಾರೆ ಎಂದು ಪ್ರಕಟಿಸಿತ್ತು ಕೂಡ. ಈಗ ಅದೇನಾಯ್ತೋ? ನಿರ್ದೇಶಕ ಉದಯ ಪ್ರಕಾಶ್ ಹೊಸ ನಾಯಕನ ಹುಡುಕಾಟದಲ್ಲಿದ್ದಾರೆ. ಅಜಯ್ ರಾವ್ ನಟಿಸುವುದಿಲ್ಲ ಎಂದಿದ್ದಾರೆ.

80ರ ದಶಕದಲ್ಲಿ ಬಂದಿದ್ದ 'ಆಟೋ ರಾಜ' ಚಿತ್ರ ನಟ ಶಂಕರ್ ನಾಗ್ ಅವರ ಸಿನಿ ಜೀವನಕ್ಕೆ ಹೊಸ ತಿರುವು ಕೊಟ್ಟ ಚಿತ್ರ. ಆ ಹೆಸರಿನ ಚಿತ್ರವನ್ನು ಬೇರೆ ಕಥೆಯಿಟ್ಟು ತೆರೆಗೆ ತರಲಿರುವವರು 'ಸ್ಯಾನ್ ವಿಷನ್ಸ್ ಕಂಪನಿಯ ಎಂ. ಡಿ. ವಿಶ್ವ ಮತ್ತು ಗಿರೀಶ್. ಇದಕ್ಕೆ ನಿರ್ದೇಶಕರಾಗಿ ಉದಯ ಪ್ರಕಾಶ್ ಸಾಥ್ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಆಯ್ಕೆಯಾದ ನಾಯಕ ಕೈಎತ್ತಿದ್ದಾರೆ, ಮತ್ತೆ ನಾಯಕ ಸಿಗಬೇಕಾಗಿದೆ. 

ಮದುವೆಯಾಗದ ನಾಯಕರೇ ಬೇಕೆನ್ನುವುದು ನಿರ್ದೇಶಕರ ಆಸೆ. ಅದರಂತೆ ಈಗ ಕನ್ನಡದ ಅವಿವಾಹಿತ ಹೀರೋಗಳತ್ತ ನೋಟ ಬೀರಿರುವ ನಿರ್ದೇಶಕರಿಗೆ 'ಶಿಶಿರ' ಚಿತ್ರದಲ್ಲಿ ಗಮನಾರ್ಹವಾಗಿ ನಟಿಸಿದ್ದ 'ಯಶಸ್ ಸೂರ್ಯ' ಕಣ್ಣಿಗೆ ಬಿದ್ದಿದ್ದಾರಂತೆ. ಅವರು ಓಕೆ ಅನ್ನದಿದ್ದರೆ ಮುಂದಿನ ಬದಲಾವಣೆಯಾಗಿ ಯಶ್ ಅಥವಾ ದಿಗಂತ್ ಬರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ. (ಒನ್ ಇಂಡಿಯಾ ಕನ್ನಡ)

English summary
Actor Ajay Rao came out from the movie 'Auto Raja'. For the replacement, Actor Yashas Surya's name is in the list. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X