»   » ಈ ವಾರ ಚಿತ್ರಮಂದಿರದಲ್ಲಿ ಮಕ್ಕಳ ಕಲರವ 'ಕು ಕು'

ಈ ವಾರ ಚಿತ್ರಮಂದಿರದಲ್ಲಿ ಮಕ್ಕಳ ಕಲರವ 'ಕು ಕು'

Posted By:
Subscribe to Filmibeat Kannada

'ಕು ಕು' ಹೆಸರು ಕೇಳಿದಾಕ್ಷಣ ಇದೊಂದು ಮಕ್ಕಳ ಚಿತ್ರ ಅನ್ನಿಸದೇ ಇರದು. ಆದರೆ ಇದೊಂದು ಮಕ್ಕಳ ಚಿತ್ರವಷ್ಟೆ ಅಲ್ಲ ಪಕ್ಕಾ ಕಮರ್ಷಿಯಲ್ ಚಿತ್ರವೂ ಹೌದು. ಮಕ್ಕಳು ಮನಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸುತ್ತಾರೆ. ಮಕ್ಕಳ ವಿಚಾರದಲ್ಲಿ ತಾತ್ಸಾರ ಮಾಡಬಾರದು ಎಂಬ ಸಂದೇಶವನ್ನು 'ಕು ಕು' ಸಾರುತ್ತದೆ.

'ಕೂಗಿ ನೋಡು ಕೂಗೋ ಮುನ್ನ ಯೋಚಿಸಿ ನೋಡು' ಎಂಬ ಟ್ಯಾಗ್ ಲೈನ್ ಸಹ 'ಕು ಕು' ಚಿತ್ರಕ್ಕೆ ನೀಡಲಾಗಿದೆ. 12 ವರ್ಷದ ಬಾಲಕನೊಬ್ಬ ತನ್ನ ಶಕ್ತಿಗೆ ಮೀರಿ ಒಂದು ಅವಘಡವನ್ನು ತಪ್ಪಿಸುವ ಪ್ರಯತ್ನದ ಕಥಾವಸ್ತುವನ್ನು "ಕು ಕು" ಚಿತ್ರ ಒಳಗೊಂಡಿದೆ. ಕುಟುಂಬ ಸಮೇತರಾಗಿ ನೋಡಬಹುದಾದ ಅಪರೂಪದ ಚಿತ್ರವಿದು.

ಮೋತಿ ಎಂಟರ್ ಟೈನ್‌ಮೆಂಟ್ ಲಾಂಛನದಲ್ಲಿ ಹನ್ಸ್‌ರಾಜ್ ಅವರು ನಿರ್ಮಿಸಿರುವ 'ಕು ಕು" ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ನಿರ್ಮಾಪಕರೇ ಕಥೆ ಬರೆದಿರುವ ಈ ಚಿತ್ರಕ್ಕೆ ಸಾಗರ್ ನಾಗಭೂಷಣ್ ಅವರ ಸಂಗೀತವಿದೆ. ಉಪೇಂದ್ರ(ಸೂಪರ್ ಸ್ಟಾರ್ ಉಪೇಂದ್ರ ಅಲ್ಲ) ಚಿತ್ರಕಥೆ ಬರೆದು ನಿರ್ದೇಶಿಸಿರುವ 'ಕು ಕು" ಚಿತ್ರಕ್ಕೆ ಸಿ.ಧನಪಾಲನ್ ಅವರ ಛಾಯಾಗ್ರಹಣವಿದೆ.

ಮೋಹನ್ ಕಾಮಕ್ಷಿ ಹಾಗೂ ರಾಜೇಂದ್ರ ಅರಸ್ ಸಂಕಲನ, ಸಿದ್ದು, ಅಲ್ಟಿಮೆಟ್ ಶಿವು ಸಾಹಸ, ಧನುಕುಮಾರ್ ನೃತ್ಯ ಮತ್ತು ಹನ್ಸ್‌ರಾಜ್, ಸಾಗರ್ ನಾಗಭೂಷಣ್, ರಾಮು ಅವರ ಗೀತರಚನೆಯಿರುವ ಚಿತ್ರದ ತಾರಾಬಳಗದಲ್ಲಿ ಮಾಸ್ಟರ್ ವಿಜಯ್, ಬೇಬಿ ವನಿತಾ, ಸಾಗರ್ ನಾಗಭೂಷಣ್ ಮುಂತಾದವರಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada