»   » ಮಮ್ಮುಟ್ಟಿ ಕನ್ನಡ 'ಶಿಕಾರಿ' ಬಿಡುಗಡೆ ಮುಂದೂಡಿಕೆ

ಮಮ್ಮುಟ್ಟಿ ಕನ್ನಡ 'ಶಿಕಾರಿ' ಬಿಡುಗಡೆ ಮುಂದೂಡಿಕೆ

Posted By:
Subscribe to Filmibeat Kannada

ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಅಭಿನಯದ ಚೊಚ್ಚಲ ಕನ್ನಡ ಚಿತ್ರ 'ಶಿಕಾರಿ' ಬಿಡುಗಡೆ ಕೊಂಚ ತಡವಾಗಲಿದೆ. ಮಾ.30ಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇತ್ತು. ಆದರೆ ಕಾರಣಾಂತರಗಳಿಂದ 'ಶಿಕಾರಿ' ಚಿತ್ರ ಮಾ.30ಕ್ಕೆ ತೆರೆಕಾಣುತ್ತಿಲ್ಲ. ಯಾವಾಗ ಬಿಡುಗಡೆ ಎಂಬ ಬಗ್ಗೆ ಸದ್ಯಕ್ಕೆ ನಿಖರ ಮಾಹಿತಿ ಇಲ್ಲ.

ಕನ್ನಡದ 'ಶಿಕಾರಿ' ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. ಬಿಗಿಯಾದ ಚಿತ್ರಕತೆ ಬಗ್ಗೆ ಆಶಾಭಾವ ವ್ಯಕ್ತಪಡಿಸಿರುವ ಮಮ್ಮುಟ್ಟಿ , ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ ಎಂದಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆಯ ಚಿತ್ರವನ್ನು 'ಗುಬ್ಬಚ್ಚಿಗಳು' ಖ್ಯಾತಿಯ ಅಭಯ್ ಸಿಂಹಾ ನಿರ್ದೇಶಿಸಿದ್ದಾರೆ.

ಚಿತ್ರದ ನಾಯಕಿ ಪೂನಂ ಬಾಜ್ವಾ. ಕಮರ್ಷಿಲ್ ಆಯಾಮದಲ್ಲಿ ರೂಪಗೊಂಡಿರುವ ಕಲಾತ್ಮಕ ಚಿತ್ರವಿದು. ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಮಮ್ಮುಟಿ ಕಾಣಿಸಲಿದ್ದಾರೆ. ಕಾದಂಬರಿಯೊಂದನ್ನು ಓದುತ್ತಾ ಅದರ ಪಾತ್ರದೊಳಗೆ ಒಂದಾಗುತ್ತಾರೆ. ನಾಯಕ ಕಾದಂಬರಿಯಲ್ಲಿನ ನಾಯಕಿಯ ಪ್ರೀತಿಯನ್ನು ಹುಡುಕುತ್ತಾ ಹೋಗುತ್ತಾನೆ. ಕಥೆ ಸ್ವಾತಂತ್ರ್ಯಪೂರ್ವಕ್ಕೆ ಹೊರಳುತ್ತದೆ. (ಒನ್‌ಇಂಡಿಯಾ ಕನ್ನಡ)

English summary
Malayalam Super Star Mammootty first Kannada film Shikari release delayed. The movie is suppose to release on 30th March. But it has now been revealed that Shikari's release will be delayed.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X