»   » ಆರಕ್ಷಕ ಚಿತ್ರದಲ್ಲಿ ಉಪೇಂದ್ರ ಪಾತ್ರದ ಸೀಕ್ರೆಟ್

ಆರಕ್ಷಕ ಚಿತ್ರದಲ್ಲಿ ಉಪೇಂದ್ರ ಪಾತ್ರದ ಸೀಕ್ರೆಟ್

Posted By:
Subscribe to Filmibeat Kannada
Upendra
ಸೂಪರ್ ಸ್ಟಾರ್ ಉಪೇಂದ್ರ ನಾಯಕತ್ವದ 'ಆರಕ್ಷಕ' ಚಿತ್ರದಲ್ಲಿ ಉಪೇಂದ್ರ ಪಾತ್ರದ ಬಗ್ಗೆ ಎಲ್ಲೆಡೆ ಸಂದೇಹ ವ್ಯಕ್ತವಾಗಿದೆ. ಸಂದೇಹವೆಂದರೆ ಗಾಬರಿಯಾಗುವಂಥದಲ್ಲ, ದ್ವಿಪಾತ್ರ ಇರಬಹುದೇ ಎಂಬ ಪ್ರಶ್ನೆ. ಯಾಕೆಂದರೆ ಜಾಹೀರಾತ್ ಹಾಗೂ ಪೋಸ್ಟರ್ ಗಳನ್ನು ನೋಡಿದರೆ ಈ ಸಂದೇಹ ಕಾಡುವುದು ಸ್ವಾಭಾವಿಕ.

ಸೆಟ್ಟೇರಿದ ದಿನದಿಂದಲೂ ಈ ಕುರಿತು ಕುತೂಹಲ ಎಲ್ಲರಿಗೂ ಇದೆ. ಕಾರಣ ವಿಭಿನ್ನ ಗೆಟಪ್ ನಲ್ಲಿ ಉಪೇಂದ್ರರ ಫೋಟೋ ಲೀಕಾಗಿದೆ. ಆದರೆ ಈ ಕುರಿತು ಉಪೇಂದ್ರ ಆಗಲೀ, ನಿರ್ದೇಶಕ ಪಿ ವಾಸು ಆಗಲಿ ಬಾಯಿ ಬಿಡುತ್ತಿಲ್ಲ. ಉಪೇಂದ್ರ ನಿರ್ದೇಶಕರನ್ನು ಕೇಳಿ ಎಂದು ನುಣುಚಿಕೊಂಡರೆ ನಿರ್ದೇಶಕ ವಾಸು ಕ್ಲೈಮ್ಯಾಕ್ಸ್ ವಿಭಿನ್ನವಾಗಿದೆ ಎಂದು ಹೇಳಿ ಜಾರಿಕೊಂಡಿದ್ದಾರೆ.

ಚಿತ್ರ ಬಿಡುಗಡೆಯಾಗುವವರೆಗು ಕುತೂಹಲ ಹಾಗೇ ಉಳಿದುಕೊಳ್ಳಲಿದೆ. ಉಪೇಂದ್ರ ಜೊತೆ ಮೊದಲಬಾರಿಗೆ ರಾಗಿಣಿ ಹಾಗೂ ಸದಾ ನಟಿಸಿದ್ದಾರೆ. ಗುರುಕಿರಣ್ ಸಂಗೀತ ಚಿತ್ರಕ್ಕಿದೆ. ಮುಂದಿನ ವರ್ಷದ ಪ್ರಾರಂಭದಲ್ಲೇ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಉಪೇಂದ್ರ ದ್ವಿಪಾತ್ರ ಗುಟ್ಟಾಗಿಯೇ ಉಳಿದಿದೆ. (ಒನ್ ಇಂಡಿಯಾ ಕನ್ನಡ)

English summary
One question arrived in everyone that whether In Kannada 'Arakshaka' movie Super Star Upendra perfprmed Dual role? Answer is not given by either Upendra or director p Vasu. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada