For Quick Alerts
  ALLOW NOTIFICATIONS  
  For Daily Alerts

  ಅಂತಿಮ ಹಂತದಲ್ಲಿ ಪೂಜಾಗಾಂಧಿ ಮಿನುಗು

  By Staff
  |
  ಚಿತ್ರನಟಿಯೊಬ್ಬಳ ವೈಯಕ್ತಿಕ ಜೀವನದ ಪ್ರೀತಿ-ಪ್ರೇಮ, ನೋವು-ನಲಿವುಗಳ ಕಥೆಯನ್ನು ಹೊಂದಿರುವ ಮಿನುಗು ಚಿತ್ರದಲ್ಲಿ ನಟಿ ಪೂಜಾ ಗಾಂಧಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಅರ್ಪಿತಾ ಚಿತ್ರ ಲಾಂಛನದಲ್ಲಿ ಬಿ. ಗಜೇಂದ್ರ ನಿರ್ಮಿಸುತ್ತಿರುವ ಈ ಚಿತ್ರವನ್ನು ಎ. ಜಯವಂತ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಸಕಲೇಶಪುರ ಸುತ್ತಮುತ್ತ ರಮಣೀಯ ಹೊರಾಂಗಣದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಈ ಚಿತ್ರತಂಡ ಈಗಾಗಲೇ ಶೇ.95ರಷ್ಟ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.

  ಬಾಕಿ ಉಳಿದ 5 ದಿನಗಳ ಚಿತ್ರೀಕರಣವನ್ನು ಕನ್ನಡ ಚಿತ್ರರಂಗದ ಸುವರ್ಣ ಹಬ್ಬದ ನಂತರ ಪೂರ್ಣಗೊಳಿಸಲಿದೆ. ಹಲವಾರು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ ಸುನಿಲ್ ಕುಮಾರ್ ಸಿಂಗ್ ಅವರು ಈ ಚಿತ್ರದ ಸಂಭಾಷಣೆಗಳನ್ನು ಬರೆದಿದ್ದು, ಸತೀಶ್ ಕುಮಾರ್ ಅವರು ಛಾಯಾಗ್ರಹಣ ಕೆಲಸ ನಿರ್ವಹಿಸಿದ್ದಾರೆ. ಫುಲ್‌ಪವರ್ ಗೋಪು ಅವರ ಸಂಗೀತ ಸಂಯೋಜನೆ, ಶ್ರೀಕಾಂತ ಕೆ. ತೋಟ ಅವರ ಸಂಕಲನ, ಚಲಪತಿ ಅವರ ಕಲಾನಿರ್ದೇಶನ, ಅರವಿಂದ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸುನೀಲ್ ರಾವ್, ಅಜಿತ್ ಹಂಡೆ, ಅಕ್ಷತಾ, ಉಮೇಶ್, ಋತು ಹಾಗೂ ಗುರು ಹೆಗ್ಗಡೆ ಪ್ರಮುಖ ತಾರಾಗಣದಲ್ಲಿದ್ದಾರೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  ಮಿನುಗು ತಾರೆಯಾಗಿ ಪೂಜಾಗಾಂಧಿ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X