For Quick Alerts
  ALLOW NOTIFICATIONS  
  For Daily Alerts

  ಗಂಡುಬೀರಿ ಹೆಣ್ಣು ಪ್ರಿಯಾ ಹಾಸನ್ ಈಗ ರೆಬೆಲ್

  By Rajendra
  |

  'ಬಿಂದಾಸ್ ಹುಡುಗಿ' ಪ್ರಿಯಾ ಹಾಸನ್ ಈಗ ಗಂಡುಬೀರಿ ಹೆಣ್ಣು! ಜೊತೆಗೆ ರೆಬಲ್ ಹುಡುಗಿ. ಪ್ರಿಯಾ ಹಾಸನ್ ಯಾಕೆ ಹೀಗಾದರು ಎನ್ನುತ್ತಿದ್ದೀರಾ? ಅದಕ್ಕೆ ಪ್ರಬಲ ಕಾರಣವೂ ಇದೆ. ಅದೇನೆಂದರೆ ಆಕೆ ಒಟ್ಟೊಟ್ಟಿಗೆ ಎರಡು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಒಂದು ಚಿತ್ರದ ಹೆಸರು 'ಗಂಡುಬೀರಿ ಹೆಣ್ಣು' ಮತ್ತೊಂದು 'ರೆಬೆಲ್'!

  'ರೆಬೆಲ್' ಚಿತ್ರವನ್ನು ಥ್ರಿಲ್ಲರ್ ಮಂಜು ನಿರ್ದೇಶಿಸಲಿದ್ದು ಎ ಗಣೇಶ್ ನಿರ್ಮಾಪಕರು. ತೆಲುಗಿನ ಜೆ ಡಿ ಚಕ್ರವರ್ತಿ ಚಿತ್ರದ ನಾಯಕ ನಟ. ಈ ಚಿತ್ರದಉಳಿದ ತಂತ್ರಜ್ಞರು ಹಾಗೂ ಕಲಾವಿದರ ಆಯ್ಕೆ ಪ್ರಕ್ರಿಯೆ ಇನ್ನಷ್ಟೆ ನಡೆಯಬೇಕಿದೆ. ಚಿತ್ರದ ಹೆಸರೇ ಹೇಳುವಂತೆ ಇದೊಂದು ಪಕ್ಕಾ ಆಕ್ಷನ್ ಪ್ರಧಾನ ಚಿತ್ರ.

  'ಬಿಂದಾಸ್ ಹುಡುಗಿ' ಚಿತ್ರದಲ್ಲಿ ಈಗಾಗಲೆ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದ ಪ್ರಿಯಾ ಈ ಚಿತ್ರದಲ್ಲೂ ಮತ್ತೊಮ್ಮೆ ಪೊಲೀಸ್ ಲಾಠಿ ಕೈಗೆತ್ತಿಕೊಳ್ಳುತ್ತಿದ್ದಾರೆ. ಇದು ದ್ವಿಭಾಷಾ ಚಿತ್ರವಾಗಿದ್ದು ತಮಿಳು ಭಾಷೆಯಲ್ಲೂ ತಯಾರಾಗಲಿದೆಯಂತೆ. ಇದಿಷ್ಟು ರೆಬಲ್ ಕತೆ.

  ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು

  ಇನ್ನು 'ಗಂಡುಬೀರಿ ಹೆಣ್ಣು' ವಿಚಾರಕ್ಕೆ ಬರುವುದಾದರೆ, ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ತಮಿಳಿನ ವಿ ಶೇಖರ್. ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕರಾದ ರಾಜಲಕ್ಷ್ಮಿ ನಿರ್ಮಾಪಕರು. ಬೇರೆಯವರ ಬ್ಯಾನರ್‌ನಲ್ಲಿ ನಟಿಸುವುದಿಲ್ಲ ಎಂದಿದ್ದ ಪ್ರಿಯಾ ಈಗ ಇದ್ದಕ್ಕಿದ್ದಂತೆ ಬೇರೆಯವರ ಎರಡು ಚಿತ್ರವನ್ನು ಒಪ್ಪಿಕೊಳ್ಳುವ ಮೂಲಕ ತಮ್ಮ ಹಳೆಯ ಶಪಥಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ. [ಪ್ರಿಯಾ ಹಾಸನ್]

  English summary
  Kannada actress Priya Hassan signed two movies. The two movies titled as Gandu Beeri Hennu and Rebel directing by V Shekhar and Thriller Manju respectively. Both are action oriented movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X