twitter
    For Quick Alerts
    ALLOW NOTIFICATIONS  
    For Daily Alerts

    ಮೂರು ದಶಕಗಳ ಬಳಿಕ ಕನ್ನಡಕ್ಕೆ ಮರಳಿದ ರಜನಿ

    By Rajendra
    |

    ನಟ ರಜನಿಕಾಂತ್ ಸುದೀರ್ಘ ಮೂರು ದಶಕಗಳ ಬಳಿಕ ಪುನಃ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಅದೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ನಟಿಸಲು. ಶಿವರಾಜ್ ಕುಮಾರ್ ಅಭಿನಯದ ನೂರನೇ ಚಿತ್ರ 'ಜೋಗಯ್ಯ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ರಜನಿಕಾಂತ್ ಕಾಣಿಸಲಿದ್ದಾರೆ.

    ರಜನಿಕಾಂತ್ ತಮಿಳು ಚಿತ್ರಗಳಲ್ಲಿ ತೊಡಗಿಕೊಂಡಿದ್ದರೂ ವರನಟ ಡಾ.ರಾಜ್ ಕುಮಾರ್ ಅವರ ಕುಟುಂಬದೊಂದಿಗೆ ಒಡನಾಡವಿದ್ದೇ ಇತ್ತು. ಹಾಗಾಗಿ ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ ಎನ್ನಲಾಗಿದೆ. ರಜನಿ ಅವರನ್ನು 'ಜೋಗಯ್ಯ' ಚಿತ್ರದ ನಿರ್ದೇಶಕ ಪ್ರೇಮ್ ಭೇಟಿ ಮಾಡಿ ತಮ್ಮ ಚಿತ್ರದಲ್ಲಿ ನಟಿಸುವಂತೆ ಕೇಳಿದ್ದರು. ಅವರ ಮಾತಿಗೆ ರಜನಿ ಕೂಡಲೆ ಓಕೆ ಎಂದಿದ್ದಾರೆ.

    ದಟ್ಸ್ ಕನ್ನಡಕ್ಕೆ ದೊರತ ಮಾಹಿತಿ ಪ್ರಕಾರ, ಜೋಗಯ್ಯ ಚಿತ್ರದಲ್ಲಿ ಕೇವಲ ಐದೇ ಐದು ನಿಮಿಷ ಕಾಲಾವಧಿಯ ಪಾತ್ರದಲ್ಲಿ ರಜನಿ ಕಾಣಿಸಲಿದ್ದಾರೆ. ಪಾತ್ರ ಚಿಕ್ಕದಾದರೂ ಪವರ್ ಫುಲ್ ಆಗಿರುತ್ತದೆಯಂತೆ. 'ಜೋಗಿ' ನೋಡಿದ್ದ ರಜನಿಕಾಂತ್ ಆಗಲೇ ಪ್ರೇಮ್ ಮುಂದಿನ ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಿದ್ದರು. ಜೋಗಯ್ಯ ಮೂಲಕ ರಜನಿ ಆಸೆ ನೆರವೇರುತ್ತಿದೆ.

    ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು

    ಕನ್ನಡದಲ್ಲಿ ರಜನಿಕಾಂತ್ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಎನ್ನಿಸಿದ ಬಳಿಕ ಅವರು ಕನ್ನಡ ಚಿತ್ರರಂಗಕ್ಕೆ ದೂರವಾದರು. ಕನ್ನಡದ ಸಹೋದರರ ಸವಾಲ್, ಕಥಾ ಸಂಗಮ, ಗಲಾಟೆ ಸಂಸಾರ, ಬಾಳು ಜೇನು, ಒಂದು ಪ್ರೇಮದ ಕತೆ, ಕಿಲಾಡಿ ಕಿಟ್ಟು, ಮಾತು ತಪ್ಪದ ಮಗ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಸಿ ವಿ ರಾಜೇಂದ್ರ ಅವರ ಬಹುಭಾಷಾ ಚಿತ್ರ 'ಗರ್ಜನೆ' ಅವರ ಅಭಿನಯದ ಕೊನೆಯ ಕನ್ನಡ ಚಿತ್ರ. [ಜೋಗಯ್ಯ]

    English summary
    Superstar Rajinikanth is returning to Sandalwood after three long decades. The actor will be doing a acting in Shivaraj Kumar starrer Kannada film Jogayya, which is directed by Prem.
    Monday, December 27, 2010, 17:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X