For Quick Alerts
  ALLOW NOTIFICATIONS  
  For Daily Alerts

  ಪಿಟೀಲು ಚೌಡಯ್ಯನಾಗಿ ರೆಬೆಲ್ ಸ್ಟಾರ್ ಅಂಬರೀಷ್

  By Rajendra
  |

  ಪಿಟೀಲು ಚೌಡಯ್ಯ ಎಂದೇ ಹೆಸರಾದವರು ತಿರುಮಕೂಡಲು ಚೌಡಯ್ಯ. ಇವರ ಮೊಮ್ಮಗನೂ ಆಗಿರುವ ರೆಬೆಲ್ ಸ್ಟಾರ್ ಅಂಬರೀಷ್ ಅವರು ಈಗ ಅಜ್ಜನ ಪಾತ್ರವನ್ನು ಪೋಷಿಸಲಿದ್ದಾರೆ. ಚೌಡಯ್ಯ ಎಂದು ಹೆಸರಿಟ್ಟಿರುವ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಕಲಾ ಸಾಮ್ರಾಟ್ ಎಸ್ ನಾರಾಯಣ್.

  ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟುಹಬ್ಬದ ದಿನ ಅಂದರೆ ಮೇ.29ರಂದು ಚಿತ್ರ ಸೆಟ್ಟೇರಲಿದೆ. ಅಂದು ಅಂಬಿ 59ನೇ ವರ್ಷಕ್ಕೆ ಅಡಿಯಿಡುತ್ತಿದ್ದಾರೆ. ಇತ್ತೀಚೆಗೆ ನಡೆದ ಕಿರಾತಕ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಅಂಬರೀಷ್ ಈ ವಿಷಯವನ್ನು ತಿಳಿಸಿದರು.

  ಮೈಸೂರು ಟಿ. ಚೌಡಯ್ಯನವರು ಕರ್ನಾಟಕ ವಾದ್ಯ ಸಂಗೀತ ವಲಯದ ಅನರ್ಘ್ಯರತ್ನ, ಅಪೂರ್ವ ತಾರೆ ಅನ್ನಿಸಿಕೊಂಡವರು. ಪಕ್ಕವಾದ್ಯವಿರಲಿ, ಸೋಲೋ ಇರಲಿ ಅವರದೇ ವಿಶಿಷ್ಟ ಛಾಪು, ಶೈಲಿ. ಹುಲಿಯಿಂತಹ ಧೀರತ್ವ, ಸಿಂಹದಂತಹ ತೇಜಸ್ಸು, ಮಹಾನ್‌ ಸಾಗರದಂತಹ ಭೋರ್ಗರೆವ ನಾದ. ಚೌಡಯ್ಯನವರನ್ನು ಮೀರಿಸುವ ಇನ್ನೊಬ್ಬ ಚೌಡಯ್ಯ ಹುಟ್ಟಲೇ ಇಲ್ಲ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Rebel Star Ambareesh's movie titled Chowdaiah will be directed by S Narayan. Chowdaiah was popularly known as Pitilu (fiddle) Chowdiah. As he hailed from Tirumakudalu Narasipura near Mysore, he was also known as Mysore T. Chowdiah. The movie will be launched on 29th May, the 59th birthday of Ambareesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X