»   » ಕನ್ನಡಕ್ಕೆ ಮಿಸ್ ಸೌತ್ ಇಂಡಿಯಾ ಶುಭಾ ಫುತೇಲಾ

ಕನ್ನಡಕ್ಕೆ ಮಿಸ್ ಸೌತ್ ಇಂಡಿಯಾ ಶುಭಾ ಫುತೇಲಾ

Posted By:
Subscribe to Filmibeat Kannada

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಮುದ್ದು ಮುಖದ ಚೆಲುವೆಯ ಆಗಮನವಾಗಿದೆ. 2010ರ ಮಿಸ್ ಸೌತ್ ಇಂಡಿಯಾ ಬ್ಯೂಟಿ ಶುಭಾ ಫುತೇಲಾ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಅಜಯ್ ರಾವ್ ಮುಖ್ಯಭೂಮಿಕೆಯಲ್ಲಿರುವ 'ಜಾದೂ' ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ರವಿವರ್ಮ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿರುವ ಶುಭಾ ಈಗಾಗಲೆ ತಮಿಳಿನ ಒಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜಾದೂ ಚಿತ್ರಕ್ಕೆ ನಿರ್ಮಾಪಕರು ಸಂಗೀತ ನಿರ್ದೇಶಕ ವಿ ಹರಿಕೃಷ್ಣ. ಫೆಬ್ರವರಿ 2ರಂದು 'ಜಾದೂ' ಚಿತ್ರಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.

ರೆಗ್ಯುಲರ್ ಚಿತ್ರೀಕರಣ ಫೆಬ್ರವರಿ 15ರಿಂದ ನಡೆಯಲಿದೆ. ಈ ಚಿತ್ರದ ಮೂಲಕ ಹರಿಕೃಷ್ಣ ನಿರ್ಮಾಪಕರಾಗಿ ಬದಲಾಗುತ್ತಿದ್ದು ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಉಳಿದ ಕಲಾವಿದರ ಹಾಗೂ ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. (ಏಜೆನ್ಸೀಸ್)

English summary
Model turned actress Shubha Phutela debuts in Kannada Jadoo opposite to Ajay Rao. The movie is being directed by Ravi Varma and produced by music director Hari Krishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada