»   » ನನ್ನ ವೃತ್ತಿ ಬದುಕಿನಲ್ಲಿ 'ಚಿಗುರಿದ ಕನಸು' ಅತ್ಯುತ್ತಮ

ನನ್ನ ವೃತ್ತಿ ಬದುಕಿನಲ್ಲಿ 'ಚಿಗುರಿದ ಕನಸು' ಅತ್ಯುತ್ತಮ

Posted By:
Subscribe to Filmibeat Kannada

ಪ್ರಸಕ್ತ ಸಾಲಿನ 'ಎಸ್ ಪಿ ವರದರಾಜು' ಪ್ರಶಸ್ತಿಯನ್ನು ಹಿರಿಯ ಚಲನಚಿತ್ರ ಕಲಾವಿದ ಸದಾಶಿವ ಬ್ರಹ್ಮಾವರ ಹಾಗೂ ಹಿರಿಯ ರಂಗಕಲಾವಿದೆ ಬಿ ಪಿ ರಾಜಮ್ಮ ಅವರಿಗೆ ಶುಕ್ರವಾರ(ಫೆ.26) ಪ್ರದಾನ ಮಾಡಲಾಯಿತು. ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಪ್ರಶಸ್ತಿ ಪ್ರದಾನ ಮಾಡಿದರು.

ಚಿರಂಜೀವಿ ಸಿಂಗ್ ಮಾತನಾಡುತ್ತಾ, ರಾಜ್ಯ ಚಲನಚಿತ್ರ ಅಕಾಡೆಮಿ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಜತೆಗೂಡಿ ರಂಗಭೂಮಿ ಮತ್ತು ಚಿತ್ರರಂಗದ 101 ಕನ್ನಡ ಚಲನಚಿತ್ರಗಳನ್ನು ಡಿವಿಡಿ ರೂಪದಲ್ಲಿ ಹೊರತಬೇಕು ಎಂದು ಮನವಿ ಮಾಡಿದರು. ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳ ಅಂತರ ಹೆಚ್ಚುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಇವರೆಡನ್ನೂ ಒಗ್ಗೂಡಿಸುವ ಪ್ರಯತ್ನ ನಿರಂತರ ನಡೆಯಲಿ ಎಂದರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತನಾಡುತ್ತಾ, ವರದರಾಜು ಅವರು ಎಂದಿಗೂ ಜೋರು ಮಾಡಲಿಲ್ಲ. ಅಪ್ಪಾಜಿ ಮತ್ತು ಅಪ್ಪಣ್ಣ ಇಬ್ಬರೂ ಇಲ್ಲದಿರುವ ಕೊರತೆ ನಮ್ಮನ್ನು ಇಂದಿಗೂ ಕಾಡುತ್ತಿದೆ. ಕಳೆದ ಎರಡು ವರ್ಷಗಳಿಂದ ನಮ್ಮ ಸಂಸ್ಥೆಯಿಂದ ಒಂದೇ ಒಂದು ಚಿತ್ರ ನಿರ್ಮಿಸಲು ಸಾಧ್ಯವಾಗದಿರಲು ಇದೂ ಒಂದು ಕಾರಣವಿರಬಹುದು ಎಂದರು.

ನನ್ನ ಸಿನಿಮಾ ವೃತ್ತಿ ಬದುಕಿನಲ್ಲಿ 'ಚಿಗುರಿದ ಕನಸು' ಅತ್ಯ್ಯ್ಯುತ್ತಮವಾದ ಚಿತ್ರ. ಅಪ್ಪ ಅಮ್ಮ, ಸೋದರ ಸೋದರಿಯರ ಜೊತೆಗೆ ಸಂಬಂಧಿಕರು ಮುಖ್ಯ ಎಂಬುದನ್ನು ಆ ಚಿತ್ರ ತೋರಿಸಿತು. ಸಂಬಂಧಿಕರನ್ನು ಅವರನ್ನು ಪ್ರೀತಿಸಬೇಕು ಎಂಬ ಪಾಠವನ್ನು ಆ ಚಿತ್ರ ಕಲಿಸಿತು ಎಂದು ಶಿವರಾಜ್ ಕುಮಾರ್ ನೆನಪಿಸಿಕೊಂಡರು.

ಪ್ರಶಸ್ತಿ ಪುರಸ್ಕೃತರಿಗೆ ನಟಿ ತಾರಾ ಅವರು ವೈಯಕ್ತಿಕವಾಗಿ ತಲಾ ರು.10,000 ಗೌರವಧನವನ್ನು ನೀಡಿ ಗೌರವಿಸಿದರು. ಬಲಗೈಲಿ ಕೊಟ್ಟದ್ದು ಎಡಗೈಗೆ ಗೊತ್ತಾಗದಂತೆ ತಾರಾ ಅವರು ಮಾಡಿದ ಸಹಾಯ ಎಲ್ಲರ ಗಮನ ಸೆಳೆಯಿತು. ಆದರೆ ತಾರಾ ಅವರು ಮಾತ್ರ ಯಾವುದೇ ಪ್ರಚಾರ ಬಯಸಲಿಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ, ನಟ ರಾಘವೇಂದ್ರ ರಾಜ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada